ಹೆಸರುಯಿಡದ ಮಾತು

ಕನಸಲ್ಲಿಯೂ ಯೋಚನೆಯ ಮಹಾಪೂರವೇ ಸಾಗುತ್ತಿದೆ. ಈ ಜೀವನದಲ್ಲಿ ಯಾವುದನ್ನ ನಾನು ಪಡೆಯಬೇಕಿದೆಯೆಂದು ಯೋಚಿಸುತ್ತಿದೆ ಆದರೆ ಜೀವನ ನನ್ನ ದಾರಿಗೆ ಸುಳಿವು ಕೊಟ್ಟಿತು.
ಜೀವನದ ಈ ಗುಣವೇ ನಮಗೆ ತುಂಬಾ ಸಲ ಸಹಾಯ ಮಾಡುತ್ತೆ. ಈ ಬದುಕಿನ ರೀತಿ ಎಷ್ಟೋ ಜನರ ಸಾವು ತಪ್ಪಿಸಿದೆ. ಅದು ರಕ್ಷಿಸುವ ಗುಣ ಹೊಂದಿದು ಅದಕ್ಕಾಗಿ ನಾವು ಎರಡು ರೀತಿ ಯೋಚಿಸಬೇಕು. ನಮ್ಮ ಬದುಕಿಗಾಗಿ ನಾವು ಬಣ್ಣ ಕೊಡಬೇಕು. ಈ ಜೀವನದ ಉದ್ದೇಶ ಅರಿತು ಸಾಗಬೇಕು.

ಯಾರದೋ ಸಲುವಾಗಿ ಬದುಕುವ ಕಾಲ ಬಾಲ್ಯದಲ್ಲಿ ಕಳೆದು ಹೋಗುತ್ತೆ ನಂತರ ಏನೇಯಿದ್ದರೂ ನಮ್ಮಗಾಗಿ ನಾವು ಬದುಕಬೇಕು ಅದಕ್ಕಾಗಿ ಸಾಧಿಸಬೇಕು. 

ನಾವು ಈ ಬದುಕಿಗಾಗಿ ನಮ್ಮ ತಂದೆತಾಯಿಗಾಗಿ ಹಣ ಕೊಡತ್ತಿವಿಯೆಂದರೆ ಅದು ನಶ್ವರ ಅದಕ್ಕಾಗಿ ಅವರಿಗೆ ಸಾಧನೆಯನ್ನು ಮಾತ್ರ ಅರ್ಪಿಸಬಹುದು.ಅದು ಸರಿಯೂ ಸಹ.

ತಯಾರಾಗಿ ಈ ಬದುಕಿಗಾಗಿ ಒಂದು ಹೆಸರು ಕೊಡಿ......

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು