ಹಾರೈಕೆ ನಿಮ್ಮದು

ಜೀವನ ನನಗೆ ಒಮ್ಮೆ ತೋರಿಸಿ ಕೊಟ್ಟಿತ್ತು.
"ನಿನ್ನ ಜೊತೆ ಕೊನೆವರೆಗೂ ಯಾರೂ ಇರುತ್ತಾರೆ"ಯೆಂದು ಜೀವನ ನನಗೆ ಪ್ರಶ್ನೆ ಮಾಡಿತ್ತು.
ನನ್ನ ಮೌನವೇ ಉತ್ತರವಾಯಿತು. ನಾನು ಇದರ ಬಗ್ಗೆ ಯೋಚಿಸಿರಲಿಲ್ಲ.
ಬದುಕಲ್ಲಿ ಹಲವರು ಹಲವು ರೀತಿ ನಮಗೆ ಗೊತ್ತೆಯಿಲ್ಲದೆ ಬರುತ್ತಾರೆ.
ಕೆಲವರು ಹತ್ತಿರವಾದರೆ ಇನ್ನು ಕೆಲವರು ದೂರಾಯಾಗುತ್ತಾರೆ.
ಕೆಲವರನ್ನ ದೂರಾ ಮಾಡುತ್ತಿವಿ. ಕೊನೆಗೆ ಆ ಕೆಲವರು ಸಹ ಹೇಳದೆ ನಮ್ಮ ದಾರಿ ಬಿಟ್ಟು ದೂರಾಯಾಗುತ್ತಾರೆ.
ಹಾಗಾದರೆ ಯಾರೂ ನಮ್ಮ ಜೊತೆ ಬರುತ್ತಾರೆ. ಉತ್ತರವಿಲ್ಲದ ಪ್ರಶ್ನೆ ಅಲ್ಲವೇ ಅಲ್ಲ.
ನಿಮ್ಮನ್ನ ನೀವು ಒಮ್ಮೆ ಕೇಳಿಕೊಳ್ಳಿ. ಯಾರೂ ಸಹ ಶಾಶ್ವತವಲ್ಲ.
ಹೋದವರನ್ನ ಕಳುಹಿಸಿ ಬಂದವರನ್ನ ಸ್ವಾಗತಿಸಿ ಜೀವನ ನಡೆಸಿ.
ಜೀವನ ನಮಗೆ ಗೊತ್ತೆಯಿಲ್ಲದ ಹಾಗೆ ಅನೇಕ ವಿಚಾರಗಳನ್ನು ತಿಳಿಸುತ್ತೆ.
ನಾವು ಅರಿತು ಸಾಗಬೇಕು ಅಷ್ಟೇ

ಈ ಬದುಕು, ಈ ಮನುಷ್ಯರು, ಈ ಭಾವನೆಗಳು ಅಬ್ಬಾ ತುಂಬಾ ಅದ್ಭುತ ಜೀವನ ಆದರೆ ಒಮ್ಮೆಮ್ಮೋ ವಿಟಿತ್ರವೆನಿಸಿದರೂ ಸುಳ್ಳಲ್ಲ..
ನಾವು ಸಾಗುವ ದಾರಿ ನಮ್ಮನ್ನ ಒಂದು ಕಡೆ ಸೇರಿಸುವ ಹಾಗೆ.
ಈ ಬದುಕು ನಿಮಗೆ ಕಷ್ಟಾ ಕೊಟ್ಟರೂ ಅದು ನಿಮ್ಮನ್ನ ಗಟ್ಟಿ ಮಾಡುವ ಸಲುವಾಗಿ ಎದುರಿಸಿ.
ಜೀವನವೇ ಸೋತು ನಿಮಗೆ ಗೆಲುವು ಕೊಡುತ್ತೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು