ಸಾಧನೆಯ ಉಸಿರಲ್ಲಿ

         ಸಾಧನೆಯ ಉಸಿರಲ್ಲಿ

ಕನಸುಗಳು ಸಾವಿರ ದಾರಿ ಒಂದೇ
ಹೆಸರು ಎರಡು ಉಸಿರು ಒಂದೇ
ಬದುಕು ಒಂದೇ ಜನ್ಮವು ಒಂದೇ
ಸಾಧನೆಯ ಉಸಿರಲ್ಲಿ ನಾನೊಬ್ಬ

ದೇವನೋಬ್ಬ ನಾಮ ಹಲವು
ಹೆಸರು ಉಸಿರಿಗೂ ಭೇದ ಬೇಡ
ಎರಡು ಒಂದೇ ಸಾಧಿಸಿದ ಮೇಲೆ

ಸಾಗುವ ದಾರಿ ದೂರವಾದರೂ
ಉಸಿರಿರುವ ದೇಹ ಸವೆದಿದೆ
ದಾರಿ ಸವೆಯಲಿ ದೇಹ ಸವಿಯದಿರಲಿ

ಸಾಧನೆಯ ಉಸಿರಲ್ಲಿ ಬೆರೆತವರಿಗೆ
ಶ್ರಮವೊಂದೇ ಮೂಲದಾರಿ
ಈ ದಾರಿಯು ಸವೆಯದಿರಲಿ
ಹರಿಸುತ್ತಿರು ದೇವರೇ
ಸಾಧನೆಯ ದಾರಿಯಲ್ಲಿ ನಾನೊಬ್ಬನೇ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು