ಬದುಕನ್ನ ಚರಿತ್ರೆಯಾಗಿಸುವ ದಾರಿ

ಬದುಕು ತುಂಬಾನೇ ಸುಂದರವಾದ ಗೂಡು. ಇಲ್ಲಿ ಎಲ್ಲರೂ ಬದುಕುವುದು ಕೆಲವು ಉದ್ದೇಶಗಳಿಗೆ ಮತ್ತು ಗುರಿಗಳಿಗಾಗಿ. ನಾನು ತುಂಬಾ ಸಲ ಯೋಚಿಸುವುದು ಎಲ್ಲವನ್ನು ಅರಿಯುವುದು ಸರಳವಲ್ಲವೆಂದು. ನನ್ನ ಜೀವನದ ಆ ಒಂದು ಮಾತುಕತೆ ವಿಶೇಷವಾದ ಮನವರಿಕೆ ಮಾಡಿಕೊಟ್ಟಿತ್ತು.

ನಾನು SIDDUGP
Writer of yourforums platform

ಈ ಅದ್ಬುತವಾದ ಸಮಯದಲ್ಲಿ ನಾನು ಎರಡು  ವಿಶೇಷವಾದ ಅಭಿಪ್ರಾಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಇದರಲ್ಲಿ ನಿಮಗೆ ಯಾವುದೇ ರೀತಿಯ ವಿಶೇಷತೆ ಕಾಣದೆಯಿದ್ದರೂ ನಾನು ಮಾತ್ರ ಒಂದು ರೀತಿಯ ಅಚ್ಚರಿಯನ್ನು ಕಂಡುಕೊಂಡೆ. ಈ ಕ್ಷಣಗಳಲ್ಲಿ ನಾನು ಬದುಕನ್ನ ಚರಿತ್ರೆಯಾಗಿಸುವ ದಾರಿಯನ್ನು ವಿವರಿಸುತ್ತೇನೆ.

Lockdown ಶುರುವಾದ ನಂತರ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿದರು. ನನಗೂ ತುಂಬಾನೇ ಅದ್ಬುತವಾದ ಸಮಯವಿದ್ದಾಗಿತ್ತು. ಕುಟುಂಬ ಮತ್ತು ನಮ್ಮ ಹಾದಿಯ ಬಗ್ಗೆ ತಿಳಿಯುವ ಮತ್ತು ತಿಳಿಸುವ ಸುಸಮಯ ಇದ್ದಾಗಿತ್ತೆಂದು ನಾನು ತಿಳಿದಿದೆ.

ನನ್ನ websiteನಲ್ಲಿ ಆಕಸ್ಮಿಕವಾಗಿ ಭೇಟಿಯಾದ Argentina ದೇಶದ ಪ್ರಜೆ sir hector ನಾನು ಭಾರತೀಯನೆಂದು ತಿಳಿದು ನನಗೊಂದು message ಕಳುಹಿಸಿದರು.

"Iam gandhi fan". ಎಂದು

ನನಗೆ ತುಂಬಾನೇ ಅಚ್ಚರಿಯಾಯಿತು.
ನಾನು ಮತ್ತೆ ತುಂಬಾ ಕುತೂಹಲದಿಂದ ಕೇಳಿದೆ

"ಅವರ ಬಗ್ಗೆ ನಿಮಗೆ ಹೇಗೆ ಗೊತ್ತು?". ಎಂದು

ಅವರು ಮುಂದುವರೆದು ಅರೇಬಿಕನಲ್ಲಿ ನನಗೆ ಹೇಳಿದರು.

"Tengo su autobiografía. Lo admiro mucho" ಎಂದರು
ಅಂದರೆ
"ನಾನು ಅವರ ಆತ್ಮ ಚರಿತ್ರೆಯನ್ನು ಓದಿದ್ದೇನೆ. ನಾನು ಅವರನ್ನ ತುಂಬಾ ಇಷ್ಟ ಪಡುತ್ತೇನೆ". ಎಂದು ಹೇಳಿದರು.

ನಾನು ಒಂದು ಕ್ಷಣ ರೋಮಾಂಚನದ ಅಲೆಯಲ್ಲಿ ತೇಲಾಡತೊಡಗಿದೆ.
ನಮ್ಮ ಭಾರತದ ಬಗ್ಗೆ ಬೇರೆ ದೇಶದವರು ಹೇಳಿದಾಗ ಅದರ ಖುಷಿನೇ ಬೇರೆಯಾಗಿರುತ್ತೆ.

ಯಾವುದೋ ದೇಶದ ಯಾವುದೋ ಒಂದು ಊರಲಿಯಿರುವ ಒಬ್ಬ ವ್ಯಕ್ತಿ ನಮ್ಮ ದೇಶದವರ ಬಗ್ಗೆ ಓದುತ್ತಾರೆ ಮತ್ತು ಇಷ್ಟ ಪಡುತ್ತಾರೆಯೆಂದರೆ ಅದು ನಿಮಗೆ ಸುಲಭವೆನಿಸಬಹುದು ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲವೆನ್ನುವುದು ನನ್ನ ಅನುಭವ.

ಮತ್ತೊಂದು ಸಂದರ್ಭದಲ್ಲಿ ನಾನು ದ. ರಾ. ಬೇಂದ್ರೆಯವರ ಮೊಮ್ಮಗಳಾದ ಪಾಲ್ಗುಣರವರನ್ನ ಭೇಟಿಯಾದಾಗ ಅವರು ನನಗೊಂದು ಮಾತು ಹೇಳಿದರು. "ಲೇಖನಿ ಹಿಡಿಯಲುಯಿರುವಷ್ಟು ಶಕ್ತಿಯನ್ನು ನಿಮ್ಮ ಬದುಕಲ್ಲಿ ಅಳವಡಿಸಿಕೊಂಡರೆ ಮಾತ್ರ ಒಂದು ಸಾಹಿತ್ಯ ಬದುಕಲು ಸಾಧ್ಯ". ಎಂದು ಅಭಿಪ್ರಾಯ ಪಟ್ಟರು.

ಈ ಎರಡು ಅಭಿಪ್ರಾಯಗಳು ತುಂಬಾನೇ ವಿಭಿನ್ನವಾಗಿವೆ. ಎಷ್ಟರ ಮಟ್ಟಿಗೆಯೆಂದರೆ ಈ ಎರಡು ಅಭಿಪ್ರಾಯಗಳು ದೇಶಗಳ ಗಡಿಯನ್ನೇ ಮೀರಿದವು. Sir vectorರವರು ನಮ್ಮ ಬಗ್ಗೆ ಓದಿದ್ದಾರೆ ಹಾಗೆ ನಮ್ಮ ಭಾರತದವರು ಆ ರೀತಿಯ ಬದುಕನ್ನ ಬದುಕುವುದು ಹೇಗೆಯೆಂದು ಕಲಿಸುವ ಪರಿ ಮಾತ್ರ ತುಂಬಾ ಅಮೋಘ.

ಹಾಗಾದರೆ,
ಆ ರೀತಿಯ ಬದುಕನ್ನ ಸಾಗಿಸುವುದಾದರೂ ಹೇಗೆ?.

ನನ್ನಲ್ಲಿಯೂ ಕೂಡ ಈ ಪ್ರಶ್ನೆಯಿತ್ತು. ಉತ್ತರಕ್ಕಾಗಿ ನಾನು ತುಂಬಾ ಯೋಚಿಸಲಿಲ್ಲ ಯಾಕೆಂದರೆ ನನಗೆ ಗೊತ್ತಿತ್ತು ನಾನು ಬದುಕುತ್ತಿರುವ ರೀತಿಯಲ್ಲಿ ನನಗೆ ಉತ್ತರ ಸಿಗುತ್ತದೆಯೆಂದು.

ಬದುಕಲ್ಲಿ ಎಲ್ಲರಿಗೂ ಎರಡು ರೀತಿಯ ನೋಟಗಳಿರುತ್ತವೆ. ನಾನು ತುಂಬಾ ಸಲ ನನ್ನ ನಿದ್ದೆಯನ್ನು ಮರೆತು ಬಿಡುತ್ತೇನೆ ಆಗ ನಾನು ನನಗೆ ಯಾವತ್ತು ಹೇಳುತ್ತಿರುತ್ತೇನೆ.

"SIDDU, ನೀನು ಬದುಕುವುದನ್ನ ಕಲಿಯುವುದಾದರೆ ಅದನ್ನು ನಿನ್ನಿಂದ ಕಲಿತುಕೋ". ಎಂದು.

ಆಗ ನನಗೆ ಮತ್ತೆ ಇದು ಪ್ರಶ್ನೆಯಾಯಿತು.
ಪ್ರಶ್ನೆಯೆಂದರೆ ಉತ್ತರವೆನ್ನುವುದು ಅಂತ್ಯವಾಗಿರುತ್ತೆ.

ಹೌದು, ನನ್ನ ಉತ್ತರ ತುಂಬಾ ಸುಲಭವಾಗಿತು. ಬದುಕುವೆನ್ನುವುದು ಎಲ್ಲರಿಗೂ ಬರೆದಿಟ್ಟ ಒಂದು ಕಾದಂಬರಿ. ಆ ಕಾದಂಬರಿಯಲ್ಲಿ ಹಲವು ಪಾತ್ರಗಳು ಬಂದು ಹೋಗುತ್ತವೆ ಆದರೆ ಆಕಾದಂಬರಿ ಒಂದೇ ಪಾತ್ರವಾಗಿ ಮುಗಿದು ಹೋಗಲಾರದು. ನಿಜ, ಮಗು ಬೆಳೆಯಲೆಬೇಕು, ಬೆಳೆಯುತ್ತಾ ಬದುಕಿನ ತನ್ನ ಪಾತ್ರವನ್ನು ಸಾಗಿಸಲೇಬೇಕು ಕೊನೆಗೆ ಸಾಯಲೇಬೇಕು ಎನ್ನುವುದು ಪರಮಸತ್ಯವಾಗಿದೆ.

ನಿಮ್ಮ ಬದುಕನ್ನ ನೀವಾಗಿ ಬದುಕಲು ಬಿಡಿ ಯಾಕೆಂದರೆ ನಿಮ್ಮ ಬದುಕಿನ ದಾರಿಯಲ್ಲಿ ನಿಮ್ಮ ತಪ್ಪುಗಳು ಇರದಿದ್ದರೆ ನಿಮ್ಮ ಬದುಕಿನಷ್ಟು ಅದ್ಬುತವಾದ ಬದುಕನ್ನ ಇಡೀ ಜಗತ್ತಿನಲ್ಲಿ ಕಾಣಲು ಸಾಧ್ಯ. ನಿಮ್ಮ ಬದುಕು ನಿಮ್ಮದು.

ನಿಮ್ಮ ಬದುಕು ಚರಿತ್ರೆಯಾಗಬೇಕಾದರೆ ನೀವು ಮಾಡುವ ಪ್ರತಿ ಕೆಲಸಗಳಲ್ಲಿಯೂ ಮನುಷ್ಯರಿಗೆ ಕೊಡುವ ಗೌರವಕ್ಕಿಂತ ಹೆಚ್ಚಿನ ಗೌರವ ಕೊಡಿ. ತುಂಬಾ ಜನ ಬಂದು ಹೋಗುತ್ತಾರೆ ಆದರೆ ನೀವು ಮಾಡುವ ಪ್ರತಿ ಕೆಲಸಗಳು ನಿಮ್ಮ ಜೀವನದಲ್ಲಿ ಒಂದು ಸಲ ಮಾತ್ರ ಬಂದು ಹೋಗುತ್ತವೆ. ಈ ಕ್ಷಣ ಕಳೆದು ಹೋದರೆ ಮತ್ತೆ ಯಾವತ್ತು ಮರಳಿ ಬಾರದು. ನಿಮ್ಮ ಕೆಲಸಗಳಿಗೆ ಮತ್ತು ನಿಮ್ಮ ಯೋಚನೆಗಳಿಗೆ ಯಾರೂ ಕಿವಿ ಕೊಡಲಾರರು ಆದರೆ ನೆನೆಪಿಡಿ ಬದುಕು ನಿಮ್ಮನ್ನ ಪ್ರೀತಿಸುತ್ತಿರುತ್ತದೆ. ನೀವು ಮಾತ್ರ ನಿಮ್ಮ ಬದುಕಿಗೆ ಗೌರವ ಕೊಡಬೇಕಾಗುತ್ತದೆ.

ನನ್ನ ವಿಷಯದಲ್ಲಿ, ನನ್ನ ಪ್ರತಿ ಸೋಲು ಮತ್ತು ನನ್ನ ತಪ್ಪುಗಳಿಗೆ ನಾನೇ ನೇರಹೊಣೆಯೆಂದು ನಾನು ಒಪ್ಪಿಕೊಂಡಾಗ ನನ್ನ ಬದುಕಲ್ಲಿ ಹಲವು ರೀತಿಯ ಬದಲಾವಣೆಗಳನ್ನು ನಾನು ಕಂಡುಕೊಂಡೆ. ಆ ಎಲ್ಲಾ ಬದಲಾವಣೆಗಳು ಕೆಟ್ಟದರ ಉತ್ತರವಾಗಲಿಲ್ಲ ಆದರೆ ಒಂದು ಒಳ್ಳೆಯ ದಾರಿಯನ್ನು ನನಗೆ ತೋರಿಸಿಕೊಟ್ಟಿತ್ತು. ಬೇರೆಯವರಿಗೆ ದಾರಿ ಮಾಡಿಕೊಡುವಷ್ಟು ಶಕ್ತಿಯುತ್ತವಾಗಿ ಅದು ಬೆಳೆದು ನಿಂತಿದೆ.

ನೀವು ನಿಮ್ಮ ಬದುಕನ್ನ ಬದುಕಿಸಿದರೆ ಅದೇ ಆದರ್ಶ ಬದುಕುಯೆಂದು ನಾನು ಕಂಡುಕೊಂಡಿರುವೆ. ಅನುಭವಗಳು ತುಂಬಾ ಜನರಿಗೆ ಹಲವು ಘಟ್ಟಗಳಲ್ಲಿ ಬರುತ್ತವೆ ಆ ಎಲ್ಲ ಅನುಭವಗಳನ್ನು ಒಪ್ಪಿಕೊಂಡರೆ ಆ ಎಲ್ಲ ಅನುಭವಗಳು ನಿಮಗೆ ಯಶಸ್ವ ಕೊಡಬಲ್ಲವು.

ಬದುಕಿ ಮತ್ತು ಬದುಕಲಿ ಬಿಡಿ ಎನ್ನುವುದು ನಿಮ್ಮ ಬದುಕಿನ ಸತ್ಯವಾದರೆ ನಿಮ್ಮ ಬದುಕು ಜಗತ್ತಿನ ಅದ್ಬುತ ಪುಟಗಳಲ್ಲಿ ಬರೆಯಲು ಸಾಧ್ಯ. ಬದುಕಿನ ಪ್ರತಿ ಹೆಜ್ಜೆಗಳನ್ನು ಅನುಭವಿಸಿ. ಅನುಭವಿಸುತ್ತಾ ನಿಮ್ಮ ಬದುಕನ್ನ ಸಾಧನೆಯ ಅದ್ಬುತದತ್ತ ಸಾಗಿಸಿಯೆನ್ನುವುದೇ ನನ್ನ ಉದ್ದೇಶವಾಗಿದೆ.

ನಿಮ್ಮ ಪ್ರೀತಿಯೊಂದಿಗೆ
SIDDUGP

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Thanks for showing your love and support... yours siddugp

ಪ್ರಚಲಿತ ಪೋಸ್ಟ್‌ಗಳು