ಕಲಿಸಿದ ಕೈ ತಾಯಿಪ್ರೀತಿ ಉಣ್ಣಬಡಿಸಿದ ದಿನವಿದು
ಹುಟ್ಟು ನನಗೆ ಎಲ್ಲವನ್ನು ಕೊಟ್ಟರೂ
ಎಲ್ಲವೂ ಅಪೂರ್ಣತೆಯ ಗೂಡಾಗಿತ್ತು
ನನ್ನ ಬದುಕು ಕೊಟ್ಟ ಅದ್ಬುತ ಕೊಡುಗೆಯೆಂದರೆ
ವಿದ್ಯಾದೇವಿಯನ್ನೇ ತಾಯಿಯಾಗಿ ಪಡೆದದ್ದು.
ಬಿದ್ದಾಗ ಎಬ್ಬಿಸಿ, ಎದ್ದಾಗ ನಡೆಸಿ
ದುಃಖದಲ್ಲಿ ಕುಟುಂಬದಂತೆ ಕೂಡಿ
ಸಂತಸದಲ್ಲಿ ಸ್ನೇಹಿತರಂತೆ ನಲಿದ್ದು
ನನ್ನ ಬದುಕಿನ ಅದ್ಬುತ ಕೊಡುಗೆಯೆಂದರೆ
ನೀವೇ ಮತ್ತು ನಿಮ್ಮ ಸಂಗವೇ
ದೇವರಲ್ಲಿನ ಸಾಕ್ಷಾತ್ಕಾರದ ಮುಂದೆ
ನೀವು ಕೈ ಹಿಡಿದು ಕಲಿಸಿ ಮುನ್ನಡಿಸಿದ್ದಿರಿ.
ದೇವರು ನನಗೆ ಎಲ್ಲವನ್ನು ಕೊಟ್ಟು
ದೇವರೇ ನೀವಾಗಿ ಸಿಕ್ಕಿದಿರಿ.
ಒಬ್ಬ ಅಮ್ಮನಂತೆ ನನ್ನ ಜೊತೆಯಾಗಿ
ಕುಟುಂಬದಂತೆ ತುಂಬು ಪ್ರೀತಿ ಹಂಚಿ
ತುದಿಗಾಲು ಇಟ್ಟು ಶಾಲೆಗೆ ಬಂದಾಗ
ಕೈ ಹಿಡಿದು ತಿದ್ದಿ ಒಂದು ಸಮಾಜಕ್ಕೆ
ನನ್ನ ಕೊಡುಗೆಯಾಗಿ ಕೊಟ್ಟಿದಿರಿ
ಪ್ರೀತಿ, ಕರುಣೆ, ಮಾನವೀಯತೆಯ
ನಿಮ್ಮ ಪಾಠಗಳು ನನ್ನ ಜೊತೆಯಾಗಿವೆ
ನನ್ನ ನೆನೆಪುಗಳ ಪುಟಗಳಲ್ಲಿ
ಹಲವರ ಪಾತ್ರ ಅಳೆದು ಹೋಗಿವೆ
ಆದರೆ ನಿಮ್ಮ ಪಾತ್ರ
ನನ್ನ ಕೊನೆಯ ಉಸಿರಿನ
ಪುಟದಲ್ಲಿಯೂ ಜೊತೆಯಾಗಬೇಕು
ಹಲವರು ಪುಣ್ಯವಂತರು ಆದರೆ
ಪುಣ್ಯದಲ್ಲಿ ಯಾರೂ ನನಗೆ ಸಮಾನರಲ್ಲ
ಯಾಕೆಂದರೆ ಕಲಿಸುವ ಮನದಲ್ಲಿ
ಅಮ್ಮನನ್ನು ಕಂಡಿರುವ ಪುಣ್ಯವಂತ ನಾನು
ಕೇವಲ ಒಬ್ಬ ವ್ಯಕ್ತಿ ಏನೂ ಸಾಧಿಸಬಲ್ಲ
ಆದರೆ ನೀವು ಇಡೀ ಜಗತ್ತಿಗೆ ಬೆಳಕು ಹಂಚುವ
ಪ್ರಜೆಗಳನ್ನು ಜಗತ್ತಿಗೆ ನೀಡಿದ್ದಿರಿ.
ಜಗವೇ ನಿಮ್ಮ ಕಾಲಯೆರಗಿ ನಮನಗೈಯುವಷ್ಟು
ಕಾಳಜಿ ಪ್ರೀತಿಯು ನಿಮ್ಮ ಮನದಲ್ಲಿ ಹರಿಯುತ್ತಿದೆ
ಅಮ್ಮಾಯೆಂದು ಕರೆಯಲೋ
ದೈವವೆಂದು ಹೊಗಳಲಿಯೆಂದು
ನಾನು ಅರೆತಿಲ್ಲ ಆದರೆ
ನನ್ನ ಚಿಕ್ಕ ಮನದ ಗುಡಿಯಲ್ಲಿರುವ
ದೇವತೆಗಳಲ್ಲಿ ನೀವು ಒಬ್ಬರಾಗಿ ನಿಂತಿರುವಿರಿ
ಕುಟುಂಬದ ಪ್ರೀತಿಯಂತೆ ನಮ್ಮನ್ನು ಕಂಡು
ನಮ್ಮ ಬಾಳಜ್ಯೋತಿಗೆ ತೈಲವ ಹಾಕಿದಿರಿ
ನಿಮ್ಮಲ್ಲಾ ನಂಬಿಕೆಗಳಲ್ಲಿ
ನಮ್ಮನ್ನು ಪಾಲುದಾರರಾಗಿ ಮಾಡಿದಿರಿ
ನಿಮ್ಮ ಕನಸಿನ ಅದ್ಬುತ ಭವಿಷ್ಯದ
ರಥವನ್ನು ನಾವು ಸಾಗಿಸುವಷ್ಟು
ಬಲವನ್ನು ನೀವೇ ಕರುಣಿಸಬೇಕು
ನಿಮ್ಮ ಆರ್ಶೀವಾದ ಪ್ರೀತಿ ನಮಗೆ
ನಮ್ಮ ಮುಂದಿನ ದಾರಿಗೆ ದೀವಿಗೆಯಾಗಲಿ
ನಿಮ್ಮ ಆತ್ಮಪ್ರಕಾಶವು ನಮ್ಮಂತಹ
ಸಾವಿರ ವಿದ್ಯಾರ್ಥಿಗಳಿಗೆ ಪ್ರಕಾಶ ನೀಡಲಿ
ಕಣ್ಣು ಕಾಣದ ಅಜ್ಞಾನಿಗಳಾದ ನಮಗೆ
ಜ್ಞಾನದ ಜ್ಯೋತಿ ಹಿಡಿದು ಬಂದ
ಅಮ್ಮ ಸರಸ್ವತಿದೇವಿಯು ನೀವು
ಅಮ್ಮಾ, ಕರವ ಕೂಡಿಸಿ ನಿಮ್ಮನ್ನ
ಬೇಡುವೆ ಕರವ ತುಂಬಿ ಹರಿಸು
ನಿಮ್ಮ ಜ್ಞಾನದಂಗಳದಲ್ಲಿ
ಮಗುವಾಗಿ ನಲಿಯುವಂತೆ
ಸಾವಿರ ಕೋಟಿ ಕನಸುಗಳು ಫಲ ಬೇಡ
ಜ್ಞಾನದ ದೀಪ ಹಿಡಿದು
ಸಮಾಜದ ಕತ್ತಲು ಕಳೆದರೆ ಸಾಕು
ಅಮ್ಮಾ, ಸಾವಿರ ಅಧರ್ಮಗಳು ಅಡ್ಡಿಯಾದರೂ
ಧರ್ಮದ ಸ್ಥಾಪನೆಗೆ ದೇವನಿರುವಂತೆ
ಜ್ಞಾನಯೋಗದಲ್ಲಿ ಕಾಳಯಿಂಚು ಕಡಿಮೆಯಾಗದಂತೆ
ನಿಮ್ಮ ಅಮೋಘತೆಯು ಮೆರೆಯಲಿ
ವಿವೇಕಾನಂದರಿಗೆ ಗುರುವಾಗಿ
ಪರಮಹಂಸರು ನಿಂತು
ಜ್ಞಾನದ ದಾರಿಯನ್ನ ತೋರಿಸಿದಂತೆ
ಶಿವಾಜಿಯವರಿಗೆ ಗುರುವಾಗಿ
ರಾಮದಾಸರು ನಿಂತು
ಕರ್ಮದ ದಾರಿಯನ್ನ ತೋರಿಸಿದಂತೆ
ಚೆನ್ನಬಸವಣ್ಣವರಿಗೆ ಗುರುವಾಗಿ
ಬಸವಣ್ಣವರು ನಿಂತು
ಸೇವಾಭಾವದ ದಾರಿಯನ್ನ ತೋರಿಸಿದಂತೆ
ಕಲಿಯುಗದಲ್ಲಿ ಅಮ್ಮ ಸರಸ್ವತಿಯಾಗಿ
ಜ್ಞಾನ, ಕರ್ಮ, ಯೋಗಗಳ ಪಾಠವನ್ನ
ಗುರುವಾಗಿ ನಿಂತು
ಮೋಕ್ಷದ ದಾರಿಯನ್ನ ತೋರಿಸಿ
ನಿಮ್ಮ ಬೆಂಬಲ, ವಿಶ್ವಾಸಗಳೇ ದಾರಿದೀವಿಗೆಯಾಗಲಿ
ನಾನು ಒಬ್ಬ ಸಾಮಾನ್ಯ ಮನುಷ್ಯನಾಗಿ
ಆದರೂ ನಿಮ್ಮ ಜ್ಞಾನದ ಸಂಪ್ರಕಾಶದಲ್ಲಿ
ನನ್ನ ಮಗುವಿನಂತೆ ಸಲುಹಿ ಹರಿಸಿ
ಈ ದಿನ ನಿಮ್ಮದಲ್ಲ
ನಿಮ್ಮನ್ನು ಪಡೆದುಕೊಂಡು
ನಮ್ಮಂತಹ ಪುಣ್ಯವಂತರ ದಿನವು
ಎಲ್ಲವನ್ನು ಬಲ್ಲವನ್ನು ನಿಮ್ಮಗೆ
ಮತ್ತಷ್ಟು ಬಲವನ್ನು ನೀಡಲಿ
ನಮ್ಮಂತಹ ಹಲವರಿಗೆ ಜೀವವಾದ
ನಿಮ್ಮ ಜೀವನ ಖುಷಿಯ ಗೂಡಾಗಲಿ
ನಮ್ಮ ಎಲ್ಲ ಖುಷಿಯು
ನಮ್ಮ ಎಲ್ಲ ಯಶಸ್ವಿನ ಹಿಂದಿನ
ಗುಟ್ಟು ನೀವೇ ಮತ್ತು ನಿಮ್ಮ ಜೀವನ
ಹುಟ್ಟುಹಬ್ಬದ ಶುಭಾಷಯಗಳು
ನನಗೆ ಜೀವನದ ನಿಜಸತ್ಯ ತೋರಿಸಿದ ದೇವತೆಗೆ
ನನಗೆ ಅದ್ಬುತ ಶಕ್ತಿ ತುಂಬಿದ ಬಲಕ್ಕೆ
ನನ್ನ ಕನ್ನಡವನ್ನು ಸುಮಧುರವಾಗಿ ಹೆಣೆದ
ಮಧುರತೆಯ ಗೂಡಿಗೆ
ನನಗೆ ಸಾಮಾಜಿಕ ಮತ್ತು ಆಧ್ಯಾತ್ಮಿಕ ಪಾಠ ಮಾಡಿದ
ಸುಮಧುರ ಅತ್ಮಕ್ಕೆ
ನನ್ನಲ್ಲಿಯೂ ಒಬ್ಬ ವ್ಯಕ್ತಿಯನ್ನ ಕಂಡ
ಕರುಣೆಯ ಪರ್ವತಕ್ಕೆ
ನಾನು ಅನುಕರಿಸಬೇಕೆನಿಸುವ
ಅದ್ಬುತ ಜೀವನಕ್ಕೆ
MAM, WISHING I MANY MANY MORE HAPPIEST RETURNS OF THE DAY, BABA BLESS U MAM......
U R MY EVERYTHING MAM....
SUCCESS, HAPPINESS AND EVERYTHING MAM....
NOT ONLY TEACHER
U R MY SECOND MOTHER MAM...
HAPPIEST BIRTHDAY TO
ONE WHO LIVING THE LEGENDARY LIFE
ONE DAY, U WILL DESERVE
A GREATEST RESPECT FROM WORLD
I WILL SURE ABOUT THIS MAM.....
HAPPIEST BIRTHDAY MAM.....
TEACHER
SECOND MOTHER
CARE TAKER
FOREVER SUPPORTER
SUPPORT SYSTEM
ENERGY BOOSTER
SPIRITUAL LIGHT
SOCIAL MASTER
AND
EVERYTHING
HAPPY BIRTHDAY TO MY MAM.......
PRATIBHA TALLUR
FOREVER STAR OF MY LIFE
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thanks for showing your love and support... yours siddugp