ಅದ್ಬುತದ ಕನಸು ಕಾಣುವಾಗ ಕಂಡ ಗೆಳೆತನದ ಜನ್ಮ

ನಾನು ನಡೆದು ಬಂದ ಹಾದಿಯಲ್ಲಿ
ಸಾವಿರ ಮುಖಗಳನ್ನು ಕಂಡೆ
ಹತ್ತು ಹಲವು ಒಳಹೊರ ಮುಖಗಳು
ಸಾವಿರ ಕನಸುಗಳ ನೋಟ ಕಂಡೆ
ಈ ದಿನ ನೀವು ಹುಟ್ಟಿದಿರಿ
ಮತ್ತೆ ಅದ್ಬುತ ನಿಮ್ಮ ಮನವೂ ಹುಟ್ಟಿತ್ತು
ನಾನು ಹೊರಟ ದಾರಿಯಲ್ಲಿ
ನಿಮ್ಮ ಗೆಳೆತನ ಜೊತೆಯಾಯಿತ್ತು
ನಿಮ್ಮಂತಹ ಸ್ನೇಹ ಅಮೋಘದ ರತ್ನವು
ಸಾಗಿದು ಬೇರೆ ದಾರಿಯಾದರೂ
ಸೇರಬೇಕಾದದ್ದು ಒಂದೇ ದಾರಿ
ಸೋತರೂ ನಮ್ಮ ಖುಷಿಯು ನೀವು
ಗೆದ್ದರೂ ನಮ್ಮ ಹೆಮ್ಮೆಯು ನೀವು
ಬಿದ್ದರೂ ಜೊತೆಯಾಗುವೇವು ನಾವು
ಎದ್ದಾಗಲೂ ಕೈ ಹಿಡಿವೇವು ನಾವು
ಪದಗಳನ್ನು ಮೀರಿದ ಸ್ನೇಹವು ನಿಮ್ಮದು
ನೀವು ಮರೆತು ಹೋದ ಪ್ರಸಂಗದಲ್ಲಿ
ನಾನು ಕಂಡ ಅದ್ಬುತ ವ್ಯಕ್ತಿತ್ವ ನಿಮ್ಮದು.
ಸಹಾಯದ ಕರುಣಾ ಮನವನ್ನು ಕಂಡಿರುವೆ
ಬೆರೆತಷ್ಟು ಮುಂದೆ ಸಾಗಿಸುವ ಕೈ ಕಂಡಿರುವೆ
ದೇವರನ್ನು ಮೀರಿದ ಸತ್ಯವಿಲ್ಲ
ಬದುಕಿನ ಒಂದು ಸತ್ಯ
ನಿತ್ಯ ಹರುಷದ ಕನಸು
ಆ ಕನಸು ನಿಮಗೆ ನನಸಾಗಲಿ
ಸ್ವಾರ್ಥರಹಿತ ನಿಮ್ಮ ಬದುಕು
ನಮ್ಮ ಮನಗಳಿಗೆ ಮಾದರಿಯಾಗಲಿ
ನಿಮ್ಮ ಬದುಕಿನ ನಡೆ
ನಮ್ಮಗೂ ದಾರಿದೀಪವಾಗಲಿ
ಹಿರಿಯಕಿರಿಯೆಂಬ ಭೇದಗಳರಿಯದ
ನಿಮ್ಮ ಮನ ಸಾಕ್ಷಾತ್ಕಾರ ಪಡೆಯಲಿ
ಎಲ್ಲವನ್ನು ಬಲ್ಲವನ್ನು ಬಾಬಾನೇ ಆಗಿರುವಾಗ
ನಂಬಿಕೆ ನಿಮ್ಮ ಜೊತೆಯಾಗಲಿ
ನಿಮ್ಮ ಬದುಕಿನ ಹಾದಿ ಸುಗಮವಾಗಲಿ
ನಿಮ್ಮ ಬದುಕಿನ ಹಾದಿಯಲ್ಲಿ ನಾನು ಜೊತೆಯಾಗಿರುವೆ
ನಿಮ್ಮ ಸ್ನೇಹವೆಂಬ ಆದರ್ಶ ಹೊತ್ತು ಸಾಗುತ್ತಿರುವೆ
ನಿಮ್ಮ ವ್ಯಕ್ತಿತ್ವಕ್ಕೆ ಸೆರೆಯಾಗಲಿ ಮಾದರಿ
ನಿಮ್ಮ ಕನಸುಗಳು ನಿಮ್ಮ ಬದುಕನ್ನ ನಡೆಸಲಿ
ಒಂದು ಮುದ್ದಾದ ಕನಸು ಆರಿಸಿ
ಸಾಗಿ ನಡೆಯಿರಿ ಸಾಗುತ್ತಾ ಕನಸು ಕಾಣಿ
ಆ ಕನಸನ್ನೇ ಜೀವಿಸಿ, ಆ ಕನಸಲ್ಲೇ ಬದುಕಿ
ಆ ಕನಸನ್ನೇ ಉಸಿರಾಡಿ, ಆ ಕನಸನ್ನೇ ಬದುಕಾಗಿಸಿಕೊಳ್ಳಿ
ಕನಸು ಇಲ್ಲದ ಮನುಷ್ಯನಿಲ್ಲ.
ಮನುಷ್ಯನಿಲ್ಲದ ನನಸಿಲ್ಲ.
ನಿಮ್ಮ ಸಾಗಿದ ದಾರಿಯ ಗುರುತುಗಳು
ಹಿಂದಿನವರೆಗೆ ಮುನ್ನಡೆಯ ಪುಸ್ತಕವಾಗಲಿ
ನಿಮ್ಮಲ್ಲಿ ಅಡಗಿರುವ ಸಾಮರ್ಥ್ಯಗಳನ್ನು ಜಗತ್ತಿಗೆ ನೀಡಿ
ಜಗತ್ತು ನಿಮ್ಮ ಬಲಕ್ಕಾಗಿ ಕಾದು ಕುಳಿತ್ತಿದೆ
ಮರೆಯಬೇಡಿ, ಮರೆತು ಸಾಗವುದನ್ನು ನಿಲ್ಲಿಸಬೇಡಿ
ಸಾವಿರ ಅಡ್ಡಿಗಳು ಬಂದರೂ ನಿಜವಾದ
ಕೈ ನಿಮ್ಮನ್ನ ಮುನ್ನಡಿಸಲು ಸಿದ್ದ ಸದಾ
ಬದುಕು ಒಂದೇ, ದಾರಿನೂ ಒಂದೇಯಾಗಲಿ
ನೀವು ಪ್ರೀತಿಸಿದ ಬದುಕಿಗೆ ಈ ದಿನ ಆರಂಭಗೀತೆಯಾಗಲಿ.
ನಿಮ್ಮ ಹುಟ್ಟು ನಮ್ಮಗೂ ಖುಷಿ ಕೊಟ್ಟಿದೆ
ನಿಮ್ಮ ಪಯಣ ಸಾಗಲಿ
ಒಂದು ಉತ್ತಮ ಗೆಲುವಿನ ಕಡೆಗೆ
ಸಾಗಲಿ ನಿಮ್ಮ ಜೀವನ
ನಾನು ಕಂಡ ನಿಮ್ಮ ಅದ್ಬುತ ಲೋಕದತ್ತ
ನಿಮ್ಮ ಸ್ನೇಹವು ನಮ್ಮಗೂ ಆದರ್ಶವಾಗಿದೆ
ನಿಮ್ಮಂತಹವರ ಸಂಗವು
ಎನ್ನ ಲೋಕದ ಸಗ್ಗ ಸೌಖ್ಯವೆಂದು
ವಚನ ನುಡಿಯುವಂತೆ ಮನ ತುಂಬಿದೆ
ಹುಟ್ಟು ಹಬ್ಬದ ಶುಭಾಷಯಗಳು..

ಇಂತಿ ನಿಮ್ಮ ಕಿರಿಯವ
SIDDUGP

HAPPIEST BIRTHDAY MY DEAR BRO NANDISH
A GREAT LIFE AHEAD....
U WILL DESERVE THE GREATEST ALWAYS AND FOREVER
AND I DESERVE UR FRIENDSHIP AS A CHILD......
Thanks for ur great friendship, u forget that a little little thinks when I strucked bt U fullfill that best friend place to said happy along with moments and iam very greatfull for that as a human being Iam veryyyy proud about ur progress and success. And iam one and wait for seeing ur success in greatest mannerisms to proud about u.....

HAPPIEST MY DEAR BROOOO......
Chill the life as like uuu....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು