ಜನನದ ಗೆಲುವು

ಸಾವಿರ ದಾರಿಯಲ್ಲಿ ನಡೆದೂ
ಹುಚ್ಚು ಜನರ ಹತ್ತು ಮುಖಗಳ ನಡುವೆ
ಯಾವ ಬಯಕೆಯೂಯಿಲ್ಲದ ಪ್ರೀತಿಯೂ
ಪಡೆದ ಭಾಗ್ಯವು ನನ್ನದು
ಒಂದು ತಾರೆಯೂ ಒಂದು ಬಣ್ಣದ ನಲಿವು
ಅಳಿವಿಲ್ಲದ ನಲಿವು ಪಡೆದು
ನಡೆಯುತ್ತಿರುವ ಬದುಕಿನ ದಾರಿದೀಪ
ಸಾವಿರ ತಪ್ಪುಗಳಲ್ಲಿಯೂ ಒಂದನ್ನು ಆರಿಸದೆ
ಜೊತೆಯಾದ ಜೊತೆಗಾರನ್ನ ಪ್ರೀತಿ ನಿನ್ನದು
ನೂರು ಜನ ನೂರಾಗಲೂ
ಒಂದನ್ನು ಪಡೆದ ಮುತ್ತು ನೀನು
ಪ್ರೀತಿಯಲ್ಲಿ ರಾಜಕುಮಾರನ್ನು
ಕಾಳಜಿಯಲ್ಲಿ ರಾಜನಗತ್ತು
ಸಾವಿರ ಜನರ ಅನಾವಶ್ಯಕತೆಯ ನಡುವೆಯೂ
ಒಂದು ರತ್ನದ ಗುಂಡಿಯಾಗಿ ಸಿಕ್ಕ
ಭಾಗ್ಯದ ಕೂಸು ನೀನು
ದೂರದ ಕನಸಲ್ಲಿ ನಲುವಾಗಿ ಹುಟ್ಟಿ
ಬಂದು ಸೇರಿದ ಭಾಗ್ಯದ ಚೆಲುವು ನೀನು
ನಿನ್ನ ಕನಸಲ್ಲಿ ನಡೆಯುವ ಜಗವು
ನಲುವಾಗಿ ಬರಲಿ ಗೆಲುವಾಗಿ ಹೊಮ್ಮಲಿ
ಪ್ರೀತಿಯನ್ನ ಅರಿಸುವ ಪ್ರೀತಿಗಾರನೇ
ಪ್ರೀತಿಯ ಒಡೆಯನಾಗಿ
ಪ್ರೀತಿಯನ್ನ ಹಂಚುವ ನಾಯಕನಾಗು
ನಿನ್ನ ನಗುವ ಕಿರುತುಟಿಯೂ
ನಿನ್ನ ಬಾಳ ಅಂದವ ಹೆಚ್ಚಿಸಲಿ
ಯಾವ ನಲುವಿನ ಒಡೆಯನೇ
ನಿನ್ನ ಖುಷಿಯು ನೂರಾಗಲಿ
ಹರುಷವು ಸಾವಿರಾಗಲಿ
ನಿನ್ನ ದಾರಿಯ ಮುಂದೆ ಸುಂದರ ಗೆಲುವು ಬರಲಿ
ಯಾವ ಬರುವಿಕೆಯ ದಾರಿಯನ್ನ ಮರೆತ
ಉಸಿರಿಗೇ ಹೆಸರಾಗು
ನಿನ್ನ ನೋವಲ್ಲೂ ನಾನೊಮ್ಮೆ ನಗುವಾಗುವೆ
ನಿನ್ನ ಕಷ್ಟದಲ್ಲಿಯೂ ನಾನೊಮ್ಮೆ ಹೆಸರಾಗುವೆ
ದಾರಿಯನ್ನೇ ಮರೆತವರಿಗೆ ನಿನ್ನೊಮ್ಮೆ ದಾರಿಯಾಗು
ಯಾವ ಜನರ ಅಂಧಕಾರದಲ್ಲಿಯೂ ಬೆಳಕಾಗು
ಎಲ್ಲವನ್ನು ಪಡೆದು ಎಲ್ಲ ಗುಣಗಳ ಒಡೆಯನಾಗು
ನಿನ್ನ ದಾರಿಯಲ್ಲಿ ನಗು ಅಲೆಯಾಗಲಿ
ನಿನ್ನ ಖುಷಿಯಲ್ಲಿ ನಲಿವು ಬಲವಾಗಲಿ
ಸಾವಿರ ಹರುಷದ ಗುಟ್ಟು ನಿನ್ನದಾಗಲಿ
ಪ್ರೀತಿಯ ಜಗತ್ತು ನಿನ್ನದಾಗಲಿ
ಪ್ರೀತಿಯ ಜನರ ಮನವು ನಿನ್ನದಾಗಲಿ
ಮನದಂಗಳದಲ್ಲಿ ಬೆಳಕಾಗು
ಜೀವನದ ಅಂತ್ಯದವರೆಗೂ ಜೊತೆಯಾಗು
ಯಾವ ಪ್ರತಾಪದ ನೋವು ತಗುಲದೆ
ಜೀವನ ದಾರಿ ನಿನ್ನದಾಗಲಿ
AMOL
LOVE U LOTTTTTTTTTT......
HAPPY BIRTHDAY TO U

FEOM
SIDDUGP

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Thanks for showing your love and support... yours siddugp

ಪ್ರಚಲಿತ ಪೋಸ್ಟ್‌ಗಳು