ಅಪ್ಪಯೆಂದರೆ ಭೂಮಿನ ಮೀರಿದವರು

ಕಾಣದ ದೇವಲೋಕದ ಕನಸು ಬಿಟ್ಟು
ಉಸಿರಲ್ಲಿ ಬೆರೆತ ತಂದೆನ ನೆನೆಸಿ
ಕನಸಲ್ಲಿ ದೇವರನ್ನ ಕಾಣುವುದನ್ನ ಬಿಟ್ಟು
ಬದುಕಿರುವ ತಂದೆಯೆಂಬ ದೇವರನ್ನ ನೋಡಿ
ಯಾರಿಗೂ ತೀರದ ಸಂಬಂಧದಲ್ಲಿ
ಯಾರಿಗೂ ತೋಚದ ಘಟ್ಟದಲ್ಲಿ
ಕೈ  ಹಿಡಿದವರೇ ನೀವೇ ನನ್ನ ದೈವ
ಹೆಸರು ಬೇಡ ಆಸ್ತಿಯೂ ಬೇಡ
ನೀವು ಒಬ್ಬರೇ ನನಗೆ ಜಗವೂ
ಕಾಣದ ಕನಸು ಬೇಡ
ಕಾಣುವ ನನಸು ಬೇಡ
ಜೊತೆಯಿರಿ ನನ್ನ ಉಸಿರುಯಿರುವರೆಗೂ
ನನ್ನ ಪ್ರತಿ ಹೆಜ್ಜೆಯಲ್ಲಿಯೂ
ನಿಮ್ಮನ್ನ ಮೆರೆಸಬೇಕೆಂಬ ಹೆಮ್ಮೆಯೂ
ನಿಮ್ಮನ್ನ ಜಗಕ್ಕೆ ತೋರಿಸಬೇಕೆಂಬ ಹುರುಪು
ಹಾರೈಸಿದರೂ ಅಳಿಸಿದರೂ
ನೀವೇ ನನಗೆ ಜಗವೂ
ಅರಿತು ಪಡೆದ ಪುಣ್ಯವು ನೀವು
ನಿಮ್ಮನ್ನ ಆರಿಸಿ ಪಡೆದ ಭಾಗ್ಯವಂತನೂ ನಾನು
ನನಗೆ ಯಾವ ಉತ್ತರವೂಯಿಲ್ಲ
ದೇವರುಯೆಂಬ ಪ್ರಶ್ನೆಯಿಲ್ಲ.
ನೀವುಯಿರುವರೆಗೂ ನನಗೇನೂ
ನೀವೇ ಜಗವೂ
ನನ್ನ ಉಸಿರು ನಿಂತ ತಕ್ಷಣ ಮರೆತು ಬಿಡುವೇ
ಒಮ್ಮೆ ನನ್ನಗಾಗಿ ಉಸಿರಾಗಿ ನಗುತ್ತಿರಿ
ನಾನು ಸಾವಲ್ಲೂ ನಗುವೆ
ನಿಮ್ಮ ನಗುವ ನೋಡುತ್ತಾ
ಕಂಗಳ ಹಿಂದಿನ ದುಃಖ ನಿಮಗೆ ತೋಚದಂತೆ
ನಟಿಸಿವೆ ನಿಮ್ಮ ಖುಷಿಗಾಗಿ
ನಿಮ್ಮಂತಹ ದೇವರು ಯಾರಿಲ್ಲ
ಈ ಜಗದಲ್ಲಿ
ಕೊನೆವರೆಗೂ ನಡೆಸಿ ದೇವರಂತೆ
ನಿಮ್ಮ ಮನದಂತೆ
ನಿಮ್ಮ ಕನಸಂತೆ
ನಿಮ್ಮ ಪ್ರೀತಿಯಂತೆ
ಮತ್ತೆ ಮತ್ತೆ
ನಿಮ್ಮ ಮಗುವಾಗಿ
ಅರಿಯದೆ ತರಲೆ ಮಾಡುವೆ
ನಿಮ್ಮ ನಗುವಾಗಿ....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು