ವಿಚಿತ್ರ ಜನರ ನಡುನೆ ಬದುಕು

ನಡೆಯುತ್ತಿರುವ ಕಾಮನಬಿಲ್ಲಿನ ಬದುಕಿಗೆ
ನೂರಾರು ಕಷ್ಟ ಹೇಳದೆ ಕೇಳದೆ
ಸಾಗಿ ಪಡೆದಷ್ಟು ನೋವು
ಹೇಳಿ ಪಡೆದಷ್ಟು ದುಃಖ
ಯಾರಿಗೆ ಬೇಕು
ಈ ವಿಚಿತ್ರ ಜನರ ಸಹವಾಸ
ನೂರು ಆಗಲು ಒಂದು ಬೇಕು
ಆದರೆ ಒಂದಾಗಲು ಸಾವಿರ ಕಾರಣ ಬೇಕು
ಸಾಗಿದ ದೋಣಿಯಲ್ಲಿ ಕುಳಿತು
ಕಳೆದ ದಾರಿ ನೆನೆದರೆ
ದೋಣಿಯ ಹೆಜ್ಜೆಗಳೇಯಿಲ್ಲ.
ಇಲ್ಲಿ ನಿನ್ನಗಿಂತ ನಾನು
ನನ್ನಗಿಂತ ನೀನು ಮೇಲುಯಿಲ್ಲ
ಪಡೆದ ಭಾಗ್ಯವಷ್ಟೆ ನಿನ್ನ ಅಹಂಕಾರಕ್ಕೆ ಸಾಕ್ಷಿ
ಒಂದು ದಿನ ನಿನ್ನ ನಾಶ
ನಿನ್ನ ಅಳಿವು ಎಲ್ಲವೂ ಸಾಧ್ಯ
ಅದೇ ನಿನ್ನ ಅಹಂಕಾರದಿಂದ
ನೀನು ಬದುಕುತ್ತಿರುವುದು
ಈ ವಿಚಿತ್ರ ಸಮಾಜದ ನಡುವೆ
ನನಗೆ ಗೊತ್ತು ಇದೇ ಸಮಾಜ
ಬಯಸಿ ನಿನ್ನ ಹುಟ್ಟಿರುವೆ
ನಿನ್ನ ಬದಲಾವಣೆ ಯಾರಿಗೂ ಬೇಡ
ಹೇಳದೆ ಕೇಳದೆ ಈ ಭೂಮಿ ನಿನ್ನ ನುಂಗಿ ಬಿಡಲಿ
ಆಗ ಈ ಸಮಾಜದ ಅಗ್ನಿ ಆರಿಹೋದಂತೆ
ನಿನ್ನ ನಾಶವೇ ಸಮಾಜದ ಉಳಿವು
ಇಲ್ಲಿ ಅಹಂಕಾರಕ್ಕೆ ಉಳಿವಿಲ್ಲ
ಇದು ವಿಚಿತ್ರ ಸಮಾಜ....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು