ಪ್ರವಾಹದಲ್ಲಿ ಜೊತೆಯಾದ ಮನಸ್ಸುಗಳು

ಆಕಾಶದಲ್ಲಿ ಸಿಡಿಲು ಹೊಡೆಯಿತ್ತು, ನಾನು ನೋಡ ನೋಡುತ್ತಿದಂತೆ ತುಂತುರು ಮಳೆಯನ್ನು ಬಯಸುತ್ತಿದ ಜೀವಗಳ ಖುಷಿಯಾದವು, ತುಂತುರ ಮಳೆಯ ಚೆಲ್ಲಾಟ ಮನಸ್ಸಿಗೆ ಮುದ್ದು ಕೊಡುತ್ತಿತ್ತು. ಹಕ್ಕಿಗಳು ಗೂಡುಸೇರಿದವು. ಚಿಕ್ಕ ಮಕ್ಕಳು ಕುಣಿದಾಡುತ್ತಿದರು, ಮುಂಗಾರಿನ ಆ ಖುಷಿಗೆ ನನ್ನ ಮನಸ್ಸು ಸಹ ಕುಣಿಯುತ್ತಿತ್ತು.

ಬೆಳಗಾವಿಯ ಮಳೆ ಮುಂಗಾರಿನಲ್ಲಿ ಮಲೆನಾಡಿನ ಸೊಬಗು ಹೊತ್ತು ನಿಲ್ಲುತ್ತದೆ. ಈ ಮಳೆಯಲ್ಲಿ ಎಲ್ಲ ಜಲಾಶಯಗಳು ಮೈತುಂಬಿಕೊಂಡು ನಲಿಯುತ್ತವೆ, ಅಮ್ಮಾ ಭೂತಾಯಿ ಹಸಿರ ಸೀರೆಹೊತ್ತು ತನ್ನ ಸೌಂದರ್ಯದಲ್ಲಿ ಮೈ ಮರೆಯುತ್ತಾಳೆ. ಎಲ್ಲ ಕಡೆ ತುಂತುರಿನ ಮೋಜು ಜೋರು ಜೋರು.

ನೋಡುನೋಡುತ್ತಿದಂತೆ ಮತ್ತೆ ಸಿಡಿಲು ಜೋರಾಗಿ ಹೊಡೆಯಿತ್ತು. ಈ ಸಲ ಆ ಅಬ್ಬರಕ್ಕೆ ವಿದ್ಯುತ್ತು ಕಂಬಗಳು ಕುಸಿದು ಬಿದ್ದವು. ವಿದ್ಯುತ್ತು ಮಾಯವಾಯಿತ್ತು. ನಲಿಯುತ್ತಿದ ಹಕ್ಕಿಗಳು ಮರೆಯಾದವು, ಮಕ್ಕಳ ಮೊಗದಲ್ಲಿ ಮೂಡಿದ ಆ ನಲಿವು ಕಳಚಿತ್ತು. ತುಂತುರು ಮಳೆಯ ಹನಿಗಳು ಜೋರಾದವು. ಬಾಬಾಯೆಂದು ನನ್ನ ಮನಸ್ಸು ಮರೆಯಾಯಿತ್ತು. ನೋಡುತ್ತಿದಂತೆ ಇಡೀ ನಮ್ಮ ಬೆಳಗಾವಿಯ ಚಿತ್ರಣವೇ ಬದಲಾಯಿತ್ತು.

ಮಳೆಯ ಅಬ್ಬರ ಜೋರಾಯಿತ್ತು. ಮಳೆಯ ದಾಳಿ ಜೋರಾಗಿ ಶುರುವಾಯಿತ್ತು. ನಾವು ನಿಸರ್ಗಕ್ಕೆ ಮಾಡಿದ ಮೋಸದಂತೆ ಮಳೆಯು ನಮ್ಮ ಮೇಲೆ ಎರಗಿಬಂತು. ಮಾಡಿದ ಕೊಳೆ ತೊಳೆದು ಹೋಗಬೇಕು, ಕರಳಲ್ಲಿ ಕರಗಿದ ನೋವಿಗೆ ಪ್ರತಿಫಲ ಸಿಗಲೇಬೇಕು ಎನ್ನುವ ಹಾಗೆ ಮಳೆ ನಮ್ಮ ಮೇಲೆ ಎರಗಿ ಬಂತು. ದೈವ ನಾಡಿನಲ್ಲಿ ಕಂಡು ಅರಿಯದ ಮಳೆಯು ಭೂತದಂತೆ ಸುರಿಯತೊಡಗಿತ್ತು. ನಾನು ಎಲ್ಲವನ್ನು ಗಮನಿಸುತ್ತಿದೆ. ಇಡೀ ಜಗತ್ತು ನಮ್ಮ ಬೆಳಗಾವಿಯತ್ತ ಮುಖ ಮಾಡಿ ನೋಡುತ್ತಿತ್ತು. ಮಳೆಯು ದಿನ ಕಳೆದಂತೆ ಒಂದೊಂದೇ ಹಳ್ಳಿಯನ್ನ ನುಂಗತೊಡಗಿತ್ತು. ಇದ್ದಕ್ಕಿದಂತೆ ಇಡೀ ಜಗತ್ತೇ ನೋಡುವ ಗೋಕಾಕಿನ ಮನೆ-ಮನಗಳು ಮುಳುಗಡೆಯಾದವು. ಹಸಿರು ಹೊತ್ತು ನಲಿಯಬೇಕಾದ ಭೂತಾಯಿ ನೀರಿನಲ್ಲಿ ತನ್ನ ದೇಹವನ್ನೇ ಮರೆಮಾಚಿಕೊಂಡಳು. ಎಲ್ಲರೂ ಗಮನಿಸುತ್ತಿದಂತೆ ಅಣೆಕಟ್ಟುಗಳ ಹರಿವು ಜೋರಾಯಿತ್ತು. ಪ್ರತಿ ಕ್ಷಣವೂ ಎಲ್ಲರ ಮನದಲ್ಲಿ ಆತಂಕ ಯಾವ ಕ್ಷಣದಲ್ಲಿ ಏನಾಗುತ್ತೆಯೆಂಬ ಭಯ. ಮಳೆ ಭೂಮಿಯನ್ನ ತಣಿಸಬೇಕಿತ್ತು ಆದರೆ ಇಡೀ ಮಾನವ ಸಂಘವನಲ್ಲ.

ಮಳೆಯ ಆರ್ಭಟಕ್ಕೆ ಎಲ್ಲ ರೀತಿಯ ಸಂಪರ್ಕಗಳು ಕಡಿತಗೊಂಡವು. ಸಂಪೂರ್ಣವಾಗಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಎಲ್ಲ ಸೇತುವೆಗಳು ಮುಚ್ಚಿಕೊಂಡವು. ಜಲಾಶಯದಲ್ಲಿರಬೇಕಾದ ನೀರು ರಸ್ತೆಗಿಳಿದು ಪ್ರತಿಭಟನೆಗೆ ಇಳಿದು ಎಲ್ಲರನ್ನು ನಿಶಬ್ದವಾಗಿ ಮಾಡಿತ್ತು. ನೀರು ಮನೆಗಳನ್ನ ಆವರಿಸಿತ್ತು. ಮನೆಗಳಲ್ಲಿದ ಜೀವಗಳು ನಲುಗಿದವು. ಮುಂದೆ ಜಗತ್ತನ್ನ ನೋಡಬೇಕಾದ ಜೀವಗಳು ನರಳುತ್ತಿದವು. ಮನೆಗೆ ಅಡಿಪಾಯವಾಗಿದ ಜೀವಗಳೇ ಭರವಸೆ ಕಳೆದುಕೊಂಡು ನಿಂತಿದವು. ನನ್ನ ಕಣ್ಣಲ್ಲಿ ಹನಿಯೊಂದು ಮನೆ ಮಾಡಿತ್ತು. ಮನೆ ಕಳೆದುಕೊಂಡು ಜನ ಬೀದಿಗೆ ನಿಂತರೂ ನಿಸರ್ಗಕ್ಕೆ ಕರುಣೆ ಬರಲಿಲ್ಲ.
ತಲೆಯ ಮೇಲೆ ಸೂರುಯಿಲ್ಲದೆ ಯಾವ
ಜೀವ ಹೇಗೆ ಬದುಕುತ್ತೆ?
ನನ್ನಲ್ಲಿ  ಉತ್ತರವಿಲ್ಲ.
ಕರುಳಕುಡಿಗಳನ್ನ ಹೊತ್ತು ತಾಯಿಂದಿರು ಬೀದಿಯಲ್ಲಿ ನಿಂತ ಅವರ ಪರಿಸ್ಥಿತಿ ಯಾವುದೇ ಕಾರಣಕ್ಕೂ ಯಾರಿಗೂ ಬರಬಾರದು. ತಮ್ಮ ಮಗುವಾದರೂ ಉಳಿಯಲ್ಲಿಯೆಂದು ತಂದೆತಾಯಿಂದರು ಅಂಗಲಾಚುತ್ತಿದರೂ ಅವರ ಆ ಅಕ್ರಂದನ ಸ್ವಾರ್ಥವಲ್ಲ. ನಿಜವಾದ ಪ್ರೀತಿ ಅದು. ಮೂಕ ಪ್ರಾಣಿಗಳು ಅಯ್ಯೋಯೆಂದು ಒದರಿದರೂ ಅವುಗಳ ಕೂಗು ಯಾರ ಕಿವಿಗೂ ಕೇಳಿಸಲಿಲ್ಲ. ನಮ್ಮ ಬೆಳಗಾವಿಯಲ್ಲಿ ಪ್ರಾಣಿಗಳೆಂದರೆ ನಮ್ಮ ಮಕ್ಕಳಿಗೆ ಸಮ. ನಮಗೆ ಎಷ್ಟೇ ನೋವು ಕಷ್ಟವಿದ್ದರೂ ನಾವು ದನಕರುಗಳಿಗೆ ಕಾಳಜಿತೋರುತ್ತೆವೆ.
ಆ ಪ್ರಾಣಿಗಳ ತಪ್ಪಾದರೂ ಏನು?
ಅವುಗಳು ನಮ್ಮ ಜೊತೆ ಇರುವುದೇ, ತಪ್ಪಾ?
ಅವುಗಳು ಕೊಚ್ಚಿಕೊಂಡು ಹೋಗುವಾಗ ಆ ಕರುಳ ಹಿಂಡುವ ಧ್ವನಿ ಯಾವುದೇ ಕಲ್ಲನ್ನು ಸಹ ಕರಗಿಸಬಲ್ಲದು. ದೇವರೇಯೆಂದು ಒದರಿದ್ದರೂ ಎಲ್ಲವೂ ನಶ್ವರ.

ಮನೆಗಳು ಕೊಚ್ಚಿಹೋಗುತ್ತಿದವು. ನೋಡುತ್ತಿದ ಜಗತ್ತು ನಮ್ಮ ಬೆಳಗಾವಿಯೆಂದು ಸುಮ್ಮನೇ ನೋಡುತ್ತಿದರೂ ಹೊರತು ಯಾರೂ ಟಿವಿ ಬಿಟ್ಟು ನಮ್ಮಗಾಗಿ ಹೊರಗೆ ಬರಲಿಲ್ಲ. ನಿಮ್ಮ ಜೊತೆ ನಾವುಯಿದ್ದಿವಿಯೆಂದು ಯಾರೂ ಬರಲಿಲ್ಲ. ಕೊಚ್ಚಿಕೊಂಡು ಹೋಗುತ್ತಿದ ಮನೆಗಳು ಅವರಿಗೆ ಮನೆ ಮಾತ್ರವಾಗಿದವು ಆದರೆ ಆ ಮನೆಗಳೇ ಕೆಲವರಿಗೆ ಜೀವನವೆಂದು ಮರೆತಿದ್ದರು. ನರುಳುತ್ತಿದ ಜೀವಗಳಿಗೆ ವೈದ್ಯಕೀಯ ವ್ಯವಸ್ಥೆ ಸಿಗದೆ ತಮ್ಮ ಪ್ರಾಣಕ್ಕಾಗಿ ಹೋರಾಡುವಾಗ ಅವರ ಮೊಗದಲ್ಲಿದ ದೀನತನ ಭಾವ ಆ ದೇವರಿಗೆ ಕಾಣಲಿಲ್ಲ. ಆ ಜೀವವನ್ನು ಕಿತ್ತುತಿನ್ನುವಂತಹ ನರಭಕ್ಷಕ ಹಸಿಹಸಿವು ದೇವರಿಗೆಯಿತ್ತಾ?
ಕರಳು ಹಿಂಡುತಿತ್ತು ಉತ್ತರ ಮಾತ್ರ ಶೂನ್ಯ ಆದರೆ ನಾವು ಮಾಡಿದ ಪ್ರತಿ ಪಾಪಕ್ಕೂ ದಂಡ ಕಟ್ಟಲೇಬೇಕು. ಮನೆಯ ಪ್ರತಿ ಆಗುಹೋಗುಗಳ ಜೀವವೇಯಾದ ಜೀವವೇ ಹೋದ ನಂತರ ಆ ಮನೆಯಲ್ಲಿ ಉಳಿದ ಜೀವಗಳ ಪರಿಸ್ಥಿತಿ ಎಷ್ಟು ಕೆಟ್ಟದಾಗಿಯಿರಬಾರದು. ಆ ಜೀವಹೋದ ದೇಹಕ್ಕೆ ಹಿಡಿ ಮಣ್ಣು ಹಾಕಲು ಸಹ ಈ ಮಹಾಮಳೆ ಅನುವು ಮಾಡಲಿಲ್ಲ.
ನಿಜವಾಗಿಯೂ ಈ ಜೀವನ, ಜೀವ ಯಾರಿಗಾಗಿ? ನಾನು ಪ್ರಶ್ನೆ ಮಾಡಬೇಕಿತ್ತು.
ನಿಸರ್ಗವೇ ನಿನ್ನ ನಡೆ ಸರಿಯೇನು? ಎಂದು
ಆದರೆ ನಾವು ಪ್ರತಿ ಸಲವೂ ಯೋಚಿಸದೆ ನಮ್ಮ ಭೂತಾಯಿಯ ಮಡಿಲಿಗೆ ಕೈ ಹಾಕಿ ಮಾಡಬಾರದ ಎಷ್ಟೋ ಪಾಪಗಳನ್ನ ಮಾಡಿದಿವಿ. ಈ ಪಾಪಗಳಿಗೆ ಒಬ್ಬರೂ ಇಬ್ಬರೂ ಹೊಣೆಯಲ್ಲ ಆದರೆ ನಾವು ಒಮ್ಮೆ ನಮ್ಮ ಬೆಳಗಾವಿಗಾಗಿ ಪ್ರಾರ್ಥಿಸೋಣಾ.

"ಅಮ್ಮಾ, ಭೂತಾಯಿ ನಾವು ನಿನ್ನ ಮಕ್ಕಳು, ನಿನ್ನ ಅಗಲಿ ನಾವುಯಿರಲಾರೆವು ಆದರೆ ನಿನ್ನ ಕೋಪದ ಮುಂದೆ ನಾವು ಬದುಕಲ್ಲು ಸಾಧ್ಯವಿಲ್ಲ. ನಿನ್ನ ಮುಂದೆ ನಾವು ಏನು ಅಲ್ಲಾ, ಅಮ್ಮಾ ನಿನ್ನ ಮಕ್ಕಳನ್ನ ಪ್ರೀತಿಸಬೇಕಾದ ಹೊಣೆ ನಿನ್ನದೇ ಎಂದು ಮರೆತು ನೀನು ವರ್ತಿಸಿದರೆ ತಾಯಿತನವೆಂಬ ಪವಿತ್ರ ಬಂಧನಕ್ಕೆ ಇಡೀ ಜಗತ್ತಿನಲ್ಲಿ ಬೆಲೆ ಸಿಗಲ್ಲ. ನಿನ್ನಂತಹ ಪವಿತ್ರ ತಾಯಿ ಕ್ಷಮಾಧರತಿಯೆಂದು ನಾವು ನಿನ್ನ ಮುದ್ದಿಸುವೇವು, ಅಮ್ಮಾ ಯಾವ ಜೀವವನ್ನು ಸಹ ನೀನು ಕಿತ್ತುತಿನ್ನುವಷ್ಟು ಕ್ರೂರಿಯಾಗಬೇಡ, ನಿನ್ನ ಮಡಿಲಲ್ಲಿ ನಲಿಯಬೇಕಾದ ಜೀವಗಳಿಗೆ ನೆರಳು ಕೊಡು. ಎಲ್ಲರೂ ಕೊನೆಗೆ ನಿನ್ನ ಸೇರುವೆವು. ನಿನ್ನ ಈ ಕೋಪಕ್ಕೆ ನಮ್ಮನ್ನ ಬಲಿ ಮಾಡಬೇಡ. ಅಮ್ಮಾಯೆಂದು ಕರೆಯುವ ಮಗುನಾಗಿ ನಿನ್ನ ಕೋರುವೆ ತಾಯಿಯಾಗಿ ಅಪ್ಪಿಕೋ, ನನ್ನ ಅಮ್ಮಾ ಯಾವತ್ತೂ ಕ್ರೂರಿಯಲ್ಲಯೆಂದು ನಾನು ಅರಿತಿರುವೆ"
ಒಂದು ಕ್ಷಣ ಪ್ರಾರ್ಥಿಸಿ ಈ ಜಗತ್ತಿನಲ್ಲಿ ಪ್ರಾರ್ಥನೆಗೆ ಒಲಿಯದ ಯಾವ ಜೀವವೂಯಿಲ್ಲ.

ಕೊಚ್ಚಿಹೋಗುತ್ತಿರುವ ಮನೆಗಳ ನಡುವೆ ಬೇಸರ ಭಾವ ಮೂಡಿದರೂ, ಅವರ ಮುಖದಲ್ಲಿ ಒಂದು ಆಶಾಕಿರಣ ನಾನು ಕಾಣುತ್ತಿದೆ. ನನ್ನಗಾಗಿ ಯಾರಾದರೂ ಬರುತ್ತಾರೆಯೆಂಬ ಸಣ್ಣ ಹೊಂಗಿರಣ ಅವರಲ್ಲಿ ನಾನು ಕಾಣುತ್ತಿದೆ. ಎಲ್ಲರೂ ಮಳೆ ಅಬ್ಬರಕ್ಕೆ ತತ್ತರಿಸಿ ಹೋಗಿದರು ಆದರೆ ಯಾವುದು ನಾಶವಾಗಬೇಕೋ ಅದು ನಾಶವಾಗಲೇಬೇಕು. ನಾಶವಾದದ್ದು ನಾಶವಾಯಿತ್ತು ಆದರೆ ಆ ಜನರಲ್ಲಿದ ಆಶಾಕಿರಣ ಸುಳ್ಳಾಗಲಿಲ್ಲ. ದೇವರು ಕೋಪಗೊಂಡರೂ ಒಳ್ಳೆಯತನ ಗೆಲ್ಲಲೇಬೇಕು ಹೌದು, ಒಳ್ಳೆಯತನ ಈ ಜಗತ್ತಿನಲ್ಲಿ ಇರುವರೆಗೂ ಎಲ್ಲರಿಗೂ ಕಾಲವಿದೆಯೆಂದು ನಾನು ಕಂಡುಕೊಂಡೆ. ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತ ಜನರಿಗೆ ಕೆಲವದಿಷ್ಟು ಕೈಗಳು ಸಹಾಯ ಮಾಡಲು ಮುಂದಾದವು. ಹೌದು ನನ್ನ Bro ಪ್ರವೀಣ ಸಹ ಕೈ ಜೋಡಿಸಿದ. ನಾನು ಚಿಕ್ಕ ಮಗುವಿನಂತೆ ಎಲ್ಲವನ್ನು ಗಮನಿಸುತ್ತಿದೆ. ಪ್ರವೀಣ ತಮಗೆ ಊಟ ಸಿಗದಿದ್ದರೂ ಎಲ್ಲರಿಗೂ ಹಂಚಿ ತಿನ್ನುವಷ್ಟು ದೊಡ್ಡತನ ಉಳಿಸಿಕೊಂಡವನು. ಹಿಡಿ ಕೈತುತ್ತು ಕೊಡುವ ಕೈಯಲ್ಲಿ ನಿಜವಾದ ಪ್ರೀತಿ ಅಡಗಿರುತ್ತೆ. ಅವನಲ್ಲಿದ ಆ ಕರುಣೆಗೆ ಅವನು ನಮ್ಮ ಬೆಳಗಾವಿಗಾಗಿ ಕೈ ಜೋಡಿಸಿದನು. ನಿಜವಾಗಿಯೂ ನನ್ನ Bro ಪ್ರವೀಣಂತಹ ಜನರಿಗಾಗಿ ಎಲ್ಲವೂ ಉಳಿದಿದೆ. ಬಿಸ್ಕೆಟ ಹಂಚುತ್ತಾ ಮಕ್ಕಳ ನಡುವೆ ಮಗುವಾಗಿ, ಪ್ರಾಣಿಗಳಿಗೆ ಮುದ್ದಾಗಿ, ಹಿರಿಜೀವಗಳಿಗೆ ಭರವಸೆಯಾಗಿ ಅವನು ನಡೆದ ದಾರಿಯೂ ನನ್ನಲ್ಲಿ ಬೆಳಕನ್ನ ಹಂಚುತ್ತಿತ್ತು. ಯಾವ ಸ್ವಾರ್ಥವೂಯಿಲ್ಲದೇ  ಮನುಷ್ಯರಾಗಿ ಹುಟ್ಟುವುದು ಸ್ವಲ್ಪ ಕಷ್ಟ ಆದರೂ ಅವನು ಹಾಗಲ್ಲ ಯಾಕೆಂದರೆ ಅವನು ನಮ್ಮವರುಯೆಂಬ ಹೆಮ್ಮೆ ನನ್ನದು.ಪ್ರೀತಿ ಹಂಚುತ್ತಾ ಎಲ್ಲವೂ ಹಂಚಿ ನಡೆದ ಪ್ರವೀಣನಿಗೆ ದೈವವೂ ಸದಾ ಜೊತೆಯಾಗಬೇಕೆಂದು ನಾನು ಬಯಸುವೆ. ಕೆಲವರು ಕುಳಿತಲ್ಲೇ ಕುಳಿತರೇ ಕೆಲವರು ನಮ್ಮ ಸಮಾಜಕ್ಕಾಗಿ ಮಿಡಿದು ಬರುತ್ತಾರೆ ಅವರಿಗಾಗಿ ಇನ್ನೂ ಜಗತ್ತು ಉಳಿದಿದೆ.

ಪ್ರವಾಹ ದೈವದ ಸ್ವತ್ತೂ ಅದನ್ನು ತಡೆಯಲ್ಲು ಸಾಧ್ಯವಿಲ್ಲ ಆದರೆ ಸ್ವಾರ್ಥ ಮರೆತು ನಮ್ಮ ಬೆಳಗಾವಿಗಾಗಿ ಪ್ರಾರ್ಥಿಸಿ ದೇವರು ಕರುಣೆ ತೋರಿಸಿದರೆ ಮುಂದೆ ಈ ಜಗತ್ತೇ ಹೊಗಳುವಂತಹ ಮಹಾಜೀವಗಳು ಹೊರಬರಬಹುದು.ನಮ್ಮ ಬೆಳಗಾವಿಯಲ್ಲಿ ಅನುಭವಿಸುತ್ತಿರುವವರು ಒಬ್ಬರಲ್ಲ, ಒಂದು ಕುಟುಂಬವಲ್ಲ, ಹಲವು ಕುಟುಂಬಗಳು ಅವರಿಗಾಗಿ ಪ್ರಾರ್ಥಿಸಿ, ಸಾಧ್ಯವಾದರೆ ಆ ಜೀವಗಳಿಗೆ ಒಮ್ಮೆ ಎದ್ದು ಹೊರಬನ್ನಿ. ಈ ಜಗತ್ತಿನಲ್ಲಿರುವ ದುಃಖಗಳನ್ನ ಗಮನಿಸಿ, ಉತ್ತರಕರ್ನಾಟಕವೆಂದು ಮರೆತು ಹೋಗಬೇಡಿ, ನಾವು ಸಹ ಮನುಷ್ಯರೇಯೆಂದು ಮರೆಯಬೇಡಿ. ಉತ್ತರ ಕರ್ನಾಟಕದವರು ಎಲ್ಲರಿಗಾಗಿ ಮಿಡಿದು ಬರುವಾಗ, ಅವರು ಇಲ್ಲಿ ಪ್ರವಾಹದಲ್ಲಿ ಹೋರಾಡುತ್ತಿದ್ದಾರೆ. ಅವರನ್ನು ಒಮ್ಮೆ ಗಮನಿಸಿ, ಪ್ರವೀಣ ಹಾಗೆ ಎಲ್ಲರೂ ಎದ್ದು ಬಂದು ಹೊರನೋಡಿದರೆ ನಿಜವಾದ ಜೀವನದಲ್ಲಿ ಅರ್ಥ ಸಿಗುತ್ತೆ. ಒಬ್ಬರ ಕಣ್ಣೀರ ಒರೆಸಿದರೆ ಮುಂದೆ ನಿಮ್ಮ ಜೀವನದಲ್ಲಿ ದುಃಖವೇಯಿರಲಾರದು. ಮರೆಯಬೇಡಿ, ಉತ್ತರಕರ್ನಾಟಕದವರು ಸಹ ಮಾನವರೇ, ಕೇವಲ ಸ್ವಾರ್ಥಿಗಳಾಗಬೇಡಿ, ದಯವಿಟ್ಟು ಒಮ್ಮೆ ನಾವು ನಿಮ್ಮವರೆಂದು ಭಾವಿಸಿ ಬನ್ನಿ ನಮ್ಮಲ್ಲಿ ಎಲ್ಲದಕ್ಕೂ ಬರವಿದ್ದರೂ ಪ್ರೀತಿಗೆಯೆಂದು ಬರವಿಲ್ಲ.

ನಮ್ಮ ಬೆಳಗಾವಿ ಕೇವಲ ಕರ್ನಾಟಕದ ಹೆಮ್ಮೆಯಾಗಬಾರದು, ಇಲ್ಲಿ ಜೀವಿಸುತ್ತಿರುವ ಪ್ರತಿ ಜೀವಗಳು ಸಹ ನಿಮ್ಮ ಮನೆ ಮನಗಳಂತೇ ಪ್ರೀತಿಸಿ ಆಗ ಮಾತ್ರ ನಮ್ಮ ಬೆಳಗಾವಿ ನಿಜವಾಗಿ ಎಲ್ಲರ ಬೆಳಗಾವಿಯಾಗಬಹುದು. ಪ್ರೀತಿ ಮಾತ್ರ ಬಯಸಬೇಡಿ, ಪ್ರೀತಿ ಕೊಡಿ, ಯಾವುದೇ ಕಾರಣಕ್ಕೂ ನಾವು ಹಿಂದೆ ಬಿದ್ದಿಲ್ಲ. ಹಾಗಂತ ನಾವು ಯಾರನ್ನು ಬಯಸುತ್ತಿಲ್ಲ ಯಾಕೆಂದರೆ ನಮ್ಮಲ್ಲಿ ಪ್ರವೀಣಂತಹ ಜೀವಗಳು ಸ್ವಾರ್ಥ ಮರೆತು ನಿಂತಿವೆ ಅವರ ಮುಂದೆ ಎಲ್ಲವೂ ಶೂನ್ಯ. ಪ್ರವಾಹದಲ್ಲಿಯೂ ಜೊತೆಯಾಗುವ ಮನುಸ್ಸುಗಳಾಗಿ ನಗುವಿನಲ್ಲಿ ಮಾತ್ರವಲ್ಲ.

ನಮ್ಮ ಬೆಳಗಾವಿ ನಿಜವಾಗಿಯೂ ನಮ್ಮ ಬೆಳಗಾವಿಯಾಗುವುದು ಕರ್ನಾಟಕದ ಪ್ರತಿ ಮನೆಮನಗಳು ಸಹ ನಮ್ಮಗಾಗಿ ತುಡಿದು ನಿಂತಾಗ ಎನ್ನುವುದು ಮಾತ್ರ ಸತ್ಯ. ನಿಸರ್ಗದ ಮುಂದೆ ನಾವು ಶೂನ್ಯ ಆದರೆ ಒಮ್ಮೆ ನಮ್ಮವರಿಗಾಗಿ ಗಟ್ಟಿಯಾಗಿ ಕೈ ಜೋಡಿಸಿ ನಿಂತು ನೋಡಿದರೆ ಈ ಜಗತ್ತು ತುಂಬಾ ಸುಂದರವಾಗಿ ಕಾಣುತ್ತೆ. ಬಾಬಾ, ಪ್ರವೀಣಂತಹ ಜೀವಗಳನ್ನ ಮತ್ತಷ್ಟು ನಮಗೆ ಕೊಡು ಯಾಕೆಂದರೆ ನಗುವಲ್ಲಿ ಜೊತೆಯಾಗುವ ಜೀವಗಳು ಇಂತಹ ಪ್ರವಾಹದಲ್ಲಿ ಕೈ ಕಟ್ಟಿ ನೋಡುತ್ತಾ ನಿಂತಿರುವುದನಾ ನಾನು ನೋಡಿದ್ದೆನೆ. ನಮ್ಮ ಬೆಳಗಾವಿ ನಮ್ಮ ಹೆಮ್ಮೆ.

"ಅಮ್ಮಾ, ಭೂತಾಯಿ ನಮ್ಮ ಬೆಳಗಾವಿಯಲ್ಲಿ ನಿನ್ನ ಹೆಮ್ಮೆಯ ಪುತ್ರರಾದ ಪ್ರವೀಣಂತಹ ಜನರು ನಿನ್ನ ಪ್ರೀತಿಯನ್ನ ಕಾಯುತ್ತಲಿದ್ದಾರೆ, ನಿನ್ನ ಕೋಪ ಕಡಿಮೆ ಮಾಡಿಕೊಂಡು ಪ್ರೀತಿಯಿಂದ ನೋಡು, ಎಷ್ಟೋ ದಣಿದ ಜೀವಿಗಳಿಗೆ ನೀನು ನಲಿವಾಗಬೇಕೆಂದು, ಎಲ್ಲಕ್ಕಿಂತ ಮಿಗಲಾಗಿ ನೀನು ಎಲ್ಲರಿಗೂ ಒಂದೊಂದು ಒಳ್ಳೆಯ ಪಾಠ ಕಲಿಸಿರಿವೆ. ನಮ್ಮವರಿಗಾಗಿ ಎಲ್ಲರನ್ನು ಒಂದು ಮಾಡಿರುವೆ. ನಿನ್ನ ಪ್ರೀತಿಗಾಗಿ ಇಡೀ ಕರ್ನಾಟಕ ಕಾಯುತ್ತಿದೆ. ಒಮ್ಮೆ ನಗುವಾಗಿ ಒಲುವಾಗಿ ಹರಿದು ಬಿಡು. ಅಮ್ಮಾ, ಕೋಪ ಮರೆತು, ನಿನ್ನ ಪ್ರೀತಿಯ ಮಗುವಾಗಿ ಕೇಳುವೆ. ಚಿಕ್ಕ ಮಗುವಾಗಿ ಹಂಬಲಿಸುವೆ ನನ್ನ ಅಮ್ಮನೆಂದು, ಅಮ್ಮಾ".....

ಪ್ರವಾಹದಲ್ಲಿ ಜೊತೆಯಾದ ಪ್ರತಿ ಜೀವಕ್ಕೂ ಧನ್ಯವಾದಗಳು. ಇದು ನಮ್ಮ ಬೆಳಗಾವಿ ಮತ್ತೆ ಯಾವತ್ತಿಗೂ ನಮ್ಮ ಹೆಮ್ಮೆ......

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು