ಆನಂದ ಬದುಕಿನ ಹಾದಿಯ ರೀತಿ
ಬದುಕಿನಲ್ಲಿ ಕೆಲವರು ನನಗೆ ಪ್ರಶ್ನಿಸಿದರು.
"ಬದುಕಿನಲ್ಲಿ ಎಲ್ಲವೂ ಒಂದೇ ರೀತಿಯಲ್ಲಿಯಿರಲು ಸಾಧ್ಯನಾ ?"
ನನ್ನಲ್ಲಿ ಆ ಸಮಯಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ.
ಬದುಕಿನ ನಿರ್ಮಲವಾದ ಕ್ಷಣಗಳನ್ನು ನಾನು ಆ ಕ್ಷಣದಲ್ಲಿ ಕಂಡುಕೊಂಡೆ. ಬದುಕು ನೋಡುವ ರೀತಿ ಮತ್ತು ನಾವು ಬದುಕನ್ನ ನೋಡುವ ರೀತಿ ಎರಡು ವಿಭಿನ್ನ. ಆ ಸಂದರ್ಭಗಳಲ್ಲಿನ ರೀತಿ ನನಗೆ ಒಳ್ಳೆಯ ಪಾಠ ಕೊಟ್ಟಿದೆ.
I am SIDDUGP
Writer of Yourforums platform
ನಾನು ಬದುಕಿನಲ್ಲಿ ನಡೆಯುವ ಕೆಲವು ಸಂದರ್ಭಗಳನ್ನ ಉಪಯೋಗಿಸಿಕೊಳ್ಳುವ ರೀತಿಯನ್ನ ಹೇಳುತ್ತೇನೆ. ಬದುಕನ್ನ ನೋಡುವ ರೀತಿಯ ಬಗ್ಗೆ ವಿವರಿಸುತ್ತೇನೆ. ಬದುಕು ಯಾವುದರ ಮೂಲವೆನ್ನುವ ಸತ್ಯಗಳ ಬಗ್ಗೆ ಅರ್ಥಮಾಡಿಕೊಳ್ಳುವುದರ ಜೊತೆಗೆ
ಎಲ್ಲರೂ ಬದುಕಿನಲ್ಲಿ ಸಂತೋಷವನ್ನು ಬಯಸುತ್ತಾರೆ ಮತ್ತು ಎಲ್ಲರೂ ಸಂತೋಷವನ್ನೇ ತೋರಿಸುತ್ತಾರೆ ಆದರೆ ನಿಜವಾಗಿ ಎಲ್ಲರೂ ಆ ಸಂತೋಷವನ್ನು ಪಡೆಯಲು ಹರಸಾಹಸ ಪಡುತ್ತಿರುತ್ತಾರೆ. ಬದುಕಿನಲ್ಲಿ ಈ ರೀತಿಯ ಸಂದರ್ಭಗಳು ನಮ್ಮ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಬಲ್ಲವು ಇಲ್ಲವೇ ಹೆಚ್ಚಿಸಬಲ್ಲವು.
ನಾನು ಚಿಕ್ಕವನಾಗಿದ್ದಾಗ, ಹಲವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವ ರೀತಿ ಹಲವು ರೀತಿಯಾಗಿತ್ತು ಆದರೆ ಅವರನ್ನ ನೋಡಿದಾಗ ಆ ಸಂತೋಷಕ್ಕಾಗಿ ಪರದಾಡುತ್ತಿದ ನೋವಿನ ಕ್ಷಣಗಳನ್ನು ನಾನು ಕಂಡುಕೊಂಡೆ. ಈ ಎರಡು ರೀತಿಯ ಅನುಭವಗಳು ನನಗೆ ತುಂಬಾ ಪರಿಣಾಮಕಾರಿಯಾಗಿದವು.
ಒಬ್ಬ ವ್ಯಕ್ತಿಯ ಸಂತೋಷ ಇಡೀ ಅವನ ಮನಸ್ಥಿತಿಯ ಮೇಲೆ ಅಡಕವಾಗಿರುತ್ತೆ. ಆ ಮನಸ್ಥಿತಿಯು ಅವನ ಭವಿಷ್ಯತ ಮತ್ತು ಭೂತಕಾಲಗಳನ್ನ ಅವಲಂಬಿಸಿರುತ್ತೆ. ಮನುಷ್ಯ ಎರಡು ಕಾರಣಗಳಿಂದ ತನ್ನ ವರ್ತಮಾನದಲ್ಲಿ ಬಳಲುತ್ತಿರುತ್ತಾನೆ.
1. ನಿಯಂತ್ರಣದಲ್ಲಿರದ ಯೋಚನೆಗಳು
2. ಹತೋಟಿಗೆ ಬರದ ನಿರ್ಧಾರಗಳು
ಈ ಎರಡು ರೀತಿಗಳನ್ನು ಸರಿಯಾಗಿ ನಿಭಾಯಿಸುವ ವ್ಯಕ್ತಿ ಸಂತೋಷವನ್ನು ಸ್ವತಃ ಅನುಭವಿಸಬಲ್ಲನು.
ಮನುಷ್ಯನಿಗೆ ಬದುಕಿನಲ್ಲಿ ಎಲ್ಲವನ್ನು ಸಮಾನನಾಗಿ ನೋಡಬೇಕೆನ್ನುವ ಅವಶ್ಯಕತೆಯಿರುವುದಿಲ್ಲ ಆದರೆ ಎಲ್ಲವನ್ನು ಸಮವಾಗಿ ತೆಗೆದುಕೊಳ್ಳಬೇಕೆನ್ನುವ ಬಯಕೆಯಿದ್ದೆ ಇರುತ್ತೆ. ಕೇವಲ ಒಂದು ಪರಿಸ್ಥಿತಿಯಿಂದ ಯಾರನ್ನು ಅಳೆಯಲು ಸಾಧ್ಯವಿಲ್ಲ. ಮನುಷ್ಯ ದಿನವಿಡೀ ದುಡಿದು ದಣಿದಾಗ ಅವನಲ್ಲಿ ಮೂಡುವ ನಿರಾಸೆಯ ಭಾವನೆಗಳು ಮತ್ತು ಅವನು ಸೋತಾಗ ಅನುಭವಿಸುವ ಹತಾಶೆಗಳು ಅವನ ಬದುಕಿನಲ್ಲಿರುವ ಖುಷಿಯ ವಿಷಯಗಳನ್ನೇ ಕಡಿಮೆ ಮಾಡಬಲ್ಲವು.
ಸುಮಾರು ಎಂಟು ತಿಂಗಳ ಹಿಂದೆ, ಒಬ್ಬ ವ್ಯಕ್ತಿ ಅನಾಯಾಸ, ಹತಾಶೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನನಗೆ ಭೇಟಿಯಾಗಿದರು. ನಾನು ಅವರ ಕುಟುಂಬದ ಬಗ್ಗೆ ವಿಚಾರಿಸುತ್ತಾ ಹೋದಂತೆ ಅವರು ಕೆಲವು ವಿಷಯಗಳನ್ನು ಮರೆಮಾಚತೊಡಗಿದಂತೆ ನನಗೆ ಭಾಸವಾಯಿತ್ತು. ಅವರನ್ನ ನಾನು ಮತ್ತೆ ಪ್ರಶ್ನಿಸಿದೆ.
"ನಿಮ್ಮ ನಿದ್ದೆಯ ಪ್ರಮಾಣವೇಷ್ಟು ಮತ್ತು ನಿಮ್ಮ ಜೀವನಶೈಲಿಯಲ್ಲಿ ಇತ್ತೀಚಿಗಷ್ಟೇ ರೂಢಿಸಿಕೊಂಡ ಹವ್ಯಾಸ ಯಾವುದು ?" ಎಂದು ಪ್ರಶ್ನಿಸಿದೆ.
ಅವರ ಉತ್ತರಗಳನ್ನು ಪರಿಶೀಲಿಸುತ್ತಾ ಹೋದಂತೆ ಅವರ ಭೂತಕಾಲದ ನಿರ್ಧಾರಗಳು ಅವರ ಜೀವನದ ಇಡೀ ಸಂತೋಷವನ್ನೇ ನುಂಗಿತ್ತು. ಹತಾಶೆ ಅವರ ಬದುಕಿನಲ್ಲಿದ ಆತುರತೆಯನ್ನ ಮಾಯಮಾಡಿತ್ತು ಹೀಗೆ ಅವರ ಊಟದ ಕ್ರಮದಲ್ಲಿ ಸಹ ತುಂಬಾ ಬದಲಾವಣೆಯಾಗಿತ್ತು.
ಇಂತಹ ಸಂದರ್ಭಗಳು ಮನುಷ್ಯನನ್ನ ತುಂಬಾ ಸುಲಭವಾಗಿ ನಾಶ ಮಾಡಬಲ್ಲವು. ಯಾವುದೇ ನಿರ್ಧಾರಗಳು, ಯೋಚನೆಗಳು ಸಹ ಮನುಷ್ಯನ್ನ ಯಾವುದೇ ರೀತಿಯಿಂದ ಅಲುಗಿಸಬಾರದು. ಆ ರೀತಿಯ ಅದ್ಬುತವಾದ ಜೀವನವನ್ನು ರೂಢಿಸಿಕೊಳ್ಳುವ ಕರ್ತವ್ಯ ಮನುಷ್ಯನದು. ಸಂತೋಷದಿಂದಯಿರಿಯೆಂದು ಸುಲಭವಾಗಿ ಹೇಳಬಹುದು ಆದರೆ ಆ ಸಂತೋಷವನ್ನು ರೂಢಿಸಿಕೊಳ್ಳುವ ರೀತಿ ತುಂಬಾ ಕಠಿಣ.
ಧಾನ್ಯದಿಂದ ಮನುಷ್ಯನ ಮನಸ್ಸನ್ನು ಸುಲಭವಾಗಿ ಧನಾತ್ಮಕ ವಿಷಯಗಳತ್ತ ಒಯ್ಯಬಹುದು. ಮನುಷ್ಯ ಎಲ್ಲವನ್ನು ಸಾಧಿಸುವುದು ಆ ಧನಾತ್ಮಕವಾದ ಯೋಚನೆಗಳಿಂದ ಮತ್ತು ವಿಚಾರಗಳಿಂದ. ಧನಾತ್ಮಕ ಯೋಚನೆಗಳು ಮಾತ್ರ ಸಂತೋಷವನ್ನು ತರಲು ಸಾಧ್ಯ. ಈ ಧನಾತ್ಮಕ ವಿಚಾರಗಳನ್ನು ತರಲು ಮನುಷ್ಯ ಧಾನ್ಯದ ಕಡೆ ಮರಳಬೇಕಾಗುತ್ತೆ. ಕೆಲವು ಸಮಯಗಳ ಧಾನ್ಯದಿಂದ ಮನುಷ್ಯ ನೂರಾರು ಪಟ್ಟು ಸಂತೋಷವನ್ನು ಪಡೆಯಬಲ್ಲನು. ಯಾವುದೇ ಸಂದರ್ಭಗಳಿದ್ದರೂ ಮನುಷ್ಯ ಎರಡು ರೀತಿಯಿಂದ ಯೋಚಿಸಿದಾಗ ಅವನ ಬದುಕಿನಲ್ಲಿ ಯಾವುದೇ ರೀತಿಯ ದುಃಖ ಕಾಡಲು ಸಾಧ್ಯವಿಲ್ಲ.
ಒಬ್ಬ ಮನುಷ್ಯನ ಅತ್ಯುತ್ತಮ ಸಮಯ ಅವನು ಕಳೆದಿರುವ ಕ್ಷಣಗಳಿಂದ ನಿರ್ಧಾರವಾಗುತ್ತವೆ. ಆ ಕ್ಷಣಗಳು ಮಾತ್ರ ಅವನ ಮುಂದಿನ ವಿಚಾರಗಳನ್ನು, ಯೋಚನೆಗಳನ್ನು ರೂಪಿಸುತ್ತವೆ. ಅದು ಬಳ್ಳೆಯದೇಯಾಗಿರಲಿ ಅಥವಾ ಕೆಟ್ಟದೇಯಾಗಿರಲಿ ಒಂದು ಒಳ್ಳೆಯ ನಡೆ ನಿಮ್ಮ ಮುಂದಿನ ಭವಿಷ್ಯದ ಹಲವು ತಪ್ಪು ದಾರಿಗಳನ್ನ ತಿದ್ದಬಲ್ಲವು.
ಜೀವನದಲ್ಲಿ ಒಳ್ಳೆಯ ನಿರ್ಧಾರಗಳನ್ನ ತೆಗೆದುಕೊಳ್ಳಿ, ನಗುತ್ತಾ ಸಾಗಿ, ಕಳೆಯುವ ಪ್ರತಿಯೊಂದು ಕ್ಷಣಗಳನ್ನ ತುಂಬಾ ಸುಂದರವಾಗಿ ಕಳೆಯಿರಿ. ಆ ಸುಂದರತೆಯಲ್ಲಿ ಬದುಕನ್ನ ಒಂದು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಳ್ಳುವ ಭರವಸೆಯಿರಲಿ. ಭರವಸೆಯೇ ಬದುಕಿನ ಸತ್ಯ. ಭರವಸೆಯೇ ಸಂತೋಷದ ಮೂಲವಾಗಿದೆ.
ಮನುಷ್ಯ ಬದುಕಿನ ಪ್ರತಿ ಕ್ಷಣದಲ್ಲಿ ಎಲ್ಲ ಕಡೆಯಲ್ಲಿಯೂ ಒಳ್ಳೆಯ ಬದಲಾವಣೆಗಳನ್ನು ಕಂಡುಕೊಂಡಾಗ ಸಂತೋಷವೆಂಬುದು ಅಳಿಯದ ಆಸ್ತಿಯಾಗಿ ಉಳಿಯಬಲ್ಲದು. ನಾನು ಹೇಳುತ್ತಿರುವುದು ಬದುಕಿನ ಪ್ರತಿ ಮೂಲೆಯಲ್ಲಿಯೂ ಸಹ ನಗುತ್ತಾಯಿರಿ. ಯಾವ ನೋವು ಸಹ ಯಾರ ನಗುವನ್ನು ಕಸಿದುಕೊಳ್ಳುವಷ್ಟು ಸಮರ್ಪಕವಾಗಿಲ್ಲಯೆನ್ನುವುದು ಸತ್ಯ. ನಿಮ್ಮ ಜೀವನವನ್ನು ನೀವೇ ಅನುಭವಿಸಲು ಶುರು ಮಾಡಿದಾಗ ಮಾತ್ರ ನೀವು ಒಬ್ಬ ಅತ್ಯುತ್ತಮವಾದ ಜೀವನವನ್ನು ಕಳೆಯಲು ಸಾಧ್ಯ. ಬದುಕಿನಲ್ಲಿ ಸಂತೋಷವನ್ನು ಹುಡುಕಬೇಡಿ. ನೀವಿಯಿದ್ದ ಜಾಗದಲ್ಲಿ ನೀವು ಸಾವಿರ ವಿಷಯಗಳನ್ನು ಸಾಧಿಸಬಲ್ಲಿರಿ ಹಾಗಾಗಿ ಯಾವುದು ಕಟ್ಟಳೆಯಲ್ಲಿ ಸಿಲುಕದೆ ಸಾಗುವ ಕರ್ತವ್ಯ ನಿಮ್ಮದಾದರೆ ನಿಮಗೆ ಸಂತೋಷ ಅಟ್ಟಿಸಿ ಕೊಡುವ ಹೊಣೆ ದೇವರದು ಎನ್ನುವುದು ಸತ್ಯಯೆಂದು ಕಂಡುಕೊಂಡ ಕ್ಷಣ ನನ್ನ ಬದುಕಲ್ಲಿ ನಾನು ಒಳ್ಳೆಯ ಬದಲಾವಣೆಯ ಜೊತೆ ಸಂತೋಷವನ್ನು ಹೊತ್ತು ತಂದೆ. ನಗುವಾಗಿ ದುಃಖದ ಮುಖಗಳಲ್ಲಿ ಸಂತೋಷವನ್ನೇ ಹೊತ್ತು ತರುವ ಆದರ್ಶವನ್ನು ಹೊತ್ತು ಬಂದೆ ನನ್ನ ಬದುಕಿನ ದಾರಿಯಲ್ಲಿ ಭರವಸೆಯ ಬೆಳಕಿನ ಅಡಿಯಲ್ಲಿ ನಾನು ಸಾಗುತ್ತಿರುವೆ....
ಇಂತಿಯವನು
SIDDUGP
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ
Thanks for showing your love and support... yours siddugp