ಸ್ವಾರ್ಥವಿಲ್ಲದ ಸ್ನೇಹ ಸಿಕ್ಕಾಗ

ಸಹಜ ಮಾತುಗಳಲ್ಲಿ ಹೇಳಲಾಗದ
ಸ್ವಾರ್ಥವಿಲ್ಲದ ಸ್ನೇಹವು
ಅಮೋಘ, ಅಪರಿಮಿತ
ನಿಜವಾದ ಸ್ನೇಹ
ಬಿದ್ದಾಗ ಎಬ್ಬಿಸಿ
ಸೋತಾಗ ಗೆಲ್ಲಿಸಿ
ದುಃಖದಲ್ಲಿಯೂ ಖುಷಿಯಾಗಿ
ಖುಷಿಯಲ್ಲಿಯೂ ಹುರುಪಾಗಿ
ನೋವಲ್ಲೂ ಜೊತೆಯಾಗಿ
ಸಂತಸದಲ್ಲಿಯೂ ಒಂದಾಗಿ
ಬದಲಾಗದ, ಬದಲಾಗಲಾರದ
ಸಂಬಂಧ ಸ್ನೇಹ
ಯಾವುದನ್ನು ಬಯಸದೆ ಬರುವುದು
ನಿಜವಾದ ಸ್ನೇಹ
ನಿಜವಾದ ಸ್ನೇಹಕ್ಕೆ
ಗೋಡೆಯಿಲ್ಲ, ಅಡ್ಡಿಯಿಲ್ಲ
ಸ್ವಾರ್ಥದ ಸ್ನೇಹಕ್ಕೆ
ಅವಶ್ಯಕತೆಯೇ ಪರದೆಯು
ಅಳಿದರೆ ನೆಲೆಸಿಗದು
ನಲೆಸಿಕ್ಕರೆ ಜೀವನವೇ ಹೀನ
ಸ್ನೇಹವೆಂದರೆ ಪ್ರಾಣಕ್ಕಿಂತ ಪರಿಶುದ್ದ
ಜಗದ ನಂಬಿಕೆಯು ಅಡಗಿದೆ
ಸ್ನೇಹವೆಂಬ ತಳಹದಿಯಲ್ಲಿ
ನಂಬಿಕೆಯೆಂಬ ಸ್ನೇಹ
ಅಳಿಯಬಾರದು ಯಾವತ್ತು
ಅಳಿದುಹೋದರೆ ಯಾವತ್ತು
ಮತ್ತೆ ಮರಳಿಬಾರದು
ಸ್ನೇಹಕ್ಕೆ ಸಾಟಿಯಿಲ್ಲ
ಅಪ್ರತಿಮ ಸಂಗತಿಗಳು
ಹೊರಹೊಮ್ಮಿವೇ ಸ್ನೇಹದಿಂದ
ನಿಜವಾದ ಸ್ನೇಹ
ಇನ್ನೋಬ್ಬರ ಖುಷಿಯನ್ನು
ಸಹ ಸಂತಸಪಡುತ್ತೆ
ಇನ್ನೊಬ್ಬರ ದುಃಖದಲ್ಲಿಯೂ
ಸಹ ವ್ಯಥೆಪಡುತ್ತೆ
ನಿಜವಾದ ಸ್ನೇಹ
ವಜ್ರಕ್ಕಿಂತ ಬೆಲೆಯುಕ್ತ
ಸ್ವಾರ್ಥಪೂರ್ಣ ಜನರ ನಡುವೆ
ನಿಜವಾದ ಸ್ನೇಹ ಹುಡುಕುವುದು
ಕತ್ತಲಲ್ಲಿ ಪರದೆ ಹುಡುಕಿದಂತೆ
ಸ್ನೇಹ ಒಳಿತಿಗೆ ದಾರಿ ಮಾಡಿಕೊಡಲಿ
ಸ್ವಾರ್ಥಗಳ ನಡುವೆ ನಿಜವಾದ ಸ್ನೇಹ
ಕಳೆದುಕೊಳ್ಳಬೇಡಿ
ಬೆಲೆಯಿಲ್ಲದ ಜಾಗದಲ್ಲಿ
ಯಾವ ಸ್ನೇಹವು ಗಟ್ಟಿಯಾಗಲಾರದು
ಮನುಷ್ಯ ಮನುಷ್ಯನಾಗಿ ಉಳಿಯಲ್ಲಿ
ಯಾವ ನಿಜವಾದ ಸ್ನೇಹಕ್ಕೂ
ಮೋಸಮಾಡುವಷ್ಟು ಮನುಷ್ಯ
ಹೀನನಾಗಬಾರದು
ಸ್ನೇಹಕ್ಕಾಗಿ ಮಿಡಿಯುತ್ತಿರುವ
ನಿಜವಾದ ಮನಸ್ಸುಗಳಿಗೆ
ದಿನ ಅರ್ಪಣೆ

Wishing the happiest friendship day

To
True friends..

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು