ಸ್ನೇಹವೆಂಬ ಪವಿತ್ರ ಬಂಧದಲ್ಲಿ

ಸಾಗಿದ ಬದುಕಲ್ಲಿ ಸ್ವಾರ್ಥಜನರ ನಡುವೆ
ಹುಟ್ಟಿದ ಮುತ್ತೊಂದು ಬೆಳಕಾಯಿತು ಇಂದು
ಸಾವಿರ ಕಷ್ಟಗಳಲ್ಲಿ ವಜ್ರದಂತೆ ಹುಟ್ಟಿ
ಬೆಳಕಿನ ಕಿರಣಗಳಲ್ಲಿ ಕತ್ತಲ ಓಡಿಸಿ
ಕಷ್ಟದಲ್ಲಿಯೂ ಒಂದಾಗಿ
ನೋವಿನಲ್ಲಿಯೂ ನಗುವಾಗಿ
ಬಿದ್ದಾಗ ಕೈ ಹಿಡಿಯುವ ಗುಣವಾಗಿ
ಮನಸ್ಸುಗಳ ನಡುವೆ ಸ್ವಾರ್ಥಯಾಗದೆ
ಹುಟ್ಟಿದ ಬೆಳದಿಂಗಳ ಅಂದ
ಜನ್ಮವಾಗಿ ಜೀವನದ ಅಂದವಾಗಿ
ಸಾಗಲಿ ಸಾವಿರ ಸಾಧನೆಗಳ ಒಡತಿಯಾಗಿ
ನಿನ್ನ ಬಾಳಪಥದಲ್ಲಿ ಸುಖವೂ
ನಗುವೂ ಹರುಷವೂ ಜೊತೆಗೂಡಲಿ
ಯಾವ ಜನ್ಮದ ಪುಣ್ಯವೋ
ಅರಿಯದೆ ಸಿಕ್ಕ ಸ್ನೇಹವೂ
ಸಾಗಲಿ ಕೊನೆಉಸಿರಿನ ಅಳಿವಿನವರೆಗೂ
ಅಮ್ಮನ ನಗುವಾಗಿ
ನಿನ್ಮ ಕಮಸುಗಳು ನನಸಿನ ಹಾದಿ ಕಾಣಲಿ
ಓ ನನ್ನ ಸ್ನೇಹವೇ ಕೇಳು
ಈ ದಿನ ಮತ್ತೊಂದು ಸಂಭ್ರಮಕ್ಕೆ ಹಾದಿಯಾಗಲಿ
ಸ್ನೇಹದ ರಥಕ್ಕೆ ಹೆಜ್ಜೆಯಾಗಲಿ...
Wish uu many more happiest returns of the day ASMITA....
Stay blessed
Innocent baby of the world.....
I don't have enough word to explain our friendship, iam blessed....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು