ಅಪ್ಪನೆಂಬ ನೆರಳಲ್ಲಿ ನಕ್ಕಾಗ

ಬದುಕಿನ ನೂರು ಮಗಲು ಕಳೆದು
ಹೊಸತರ ಆರಂಭ ಅರಿವಿಲ್ಲದೆ
ಅರಿತು ಸಾಗಿದ ಬದುಕಿನ ನೂರು ಮಾತಲ್ಲೂ
ಹೊಸ ಕಿರಣದ ಆಸರೆ ನನಗೆ ತಂದೆನೇ
ಮಗುವಾಗಿ ಅತ್ತು ಖುಷಿಯಾಗಿ ನಕ್ಕು
ತಂದೆಯ ಕೈ ತುತ್ತಿನಲ್ಲಿ ಸ್ವರ್ಗ ಕಂಡು
ತಂದೆಯ ಮಡಿಲಲ್ಲಿ ಕನಸು ಕಂಡು
ಹಚ್ಚ ಹಸಿರ ಕನಸುಗಳಲ್ಲಿ ನಗುವಾಗಿ
ತಂದೆಯೆಂದರೆ ನೂರು ಮಾತಲ್ಲೂ ಉಳಿದ ಒಂದು ಸತ್ಯ
ಸಾವಿರ ನೋಟದಲ್ಲಿಯೂ ಅಳಿಯದ ರೂಪ
ಕೈಗೆ ದೊರಕದ ಮುತ್ತು ಹವಳದ ಮಾಲೆ
ಕಣ್ಣಿನ ನೋಟದಲ್ಲಿ ಮರೆಯಾಗದೆ ಆಸರೆಯಾದ ಕನಸು
ಅಪ್ಪನೆಂದರೆ ನೂರು ಬಯಕೆ
ಸಾವಿರ ಖುಷಿಯ ನೋಟ
ತಂದೆಯ ಮಡಿಲೇ ದೇವರ ಮಡಿಲು
ನಾನು ಪುಣ್ಯವಂತ ಸಾವಿರರಲ್ಲಿ ಒಬ್ಬ
ದೇವರನ್ನೇ ಪಡೆದ ಭಾಗ್ಯವಂತ
ಹರುಷದ ಖುಷಿಯಲ್ಲಿ ಪಡೆದ ದಾರಿ
ನನ್ನ ತಂದೆಯೇ ನನ್ನ ಈ ಖುಷಿಯು....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು