ಅಪ್ಪನ ಮಡಿಲಲ್ಲಿ ಸಾವಿನ ಕನಸು ಕಾಣುವೆ

ಹುಟ್ಟಿನ ಮುಂದೆ ಸಾವಿನ ಹೆಸರು ಬರೆದಿರುತ್ತೆ
ಬದುಕಿನ ಏಳಲ್ಲಿ ಸೋಲು ಕಾಣುವಂತೆ
ನನ್ನ ತಂದೆ ಮಡಿಲಲ್ಲಿ ಮಲಗುವ ಆಸೆ
ಮಲಗುತ್ತಾ ಅವರ ಕನಸಾಗುವಯಾಸೆ
ಅವರ ನೋವಲ್ಲೂ ಯಾರೂ ತೋರದಂತೆ
ನನ್ನ ನೋವಲ್ಲೂ ಯಾರೂ ಜೊತೆಯಿಲ್ಲದಂತೆ
ನಡೆಯಿತ್ತಿರುವ ಬದುಕಲ್ಲಿ ಯಾರೂ ಬೇಕಿಲ್ಲ
ನನ್ನ ತಂದೆಯ ಮಡಿಲಲ್ಲಿ ಮಗುವಾಗಿ
ಮಲಗಬೇಕೆಂಬ ಆಸೆ
ನನ್ನ ತಂದೆಯ ಹೆಸರಲ್ಲಿ ನಲಿದಾಡಬೇಕೆಂಬ
ಕನವರಿಕೆಯಲ್ಲಿ ಮಲಗಬೇಕೆಂಬ ಆಸೆ
ಮಗುವಾಗಿ ನಿಮ್ಮ ಕೈ ತುತ್ತು ತಿನ್ನುವ ಆಸೆ
ಮಗುವಾಗಿ ನಿಮ್ಮ ಜೊತೆ ಗಲಾಟೆ ಮಾಡಬೇಕೆಂಬ ಆಸೆ
ಮಗುವಾಗಿ ನಿಮ್ಮ ಹೆಗಲೇರಬೇಕೆಂಬ ಆಸೆ
ಮಗುವಾಗಿ ನಿಮ್ಮ ಜೊತೆ ಕುಣಿಯುವ ಆಸೆ
ಮಗುವಾಗಿ ನಿಮ್ಮ ಜೊತೆ ನಡೆಯುವ ಆಸೆ
ಮಗುವಾಗಿ ನಿಮ್ಮ ಜೊತೆ ಮಳೆಯಲ್ಲಿ ನೆನೆಯುವ ಆಸೆ
ಮಗುವಾಗಿ ನಿಮ್ಮ ಜೊತೆ ನಗಬೇಕೆಂಬ ಆಸೆ
ಅಪ್ಪಾಯೆಂದರೆ ಆಕಾಶ ತಾನೇ
ಆ ಆಕಾಶದಲ್ಲಿ ಕಾಮನಬಿಲ್ಲಾಗಿ ಮೆರೆಯಬೇಕೆಂಬ ಆಸೆ
ಮೋಡದ ಮರೆಯಲ್ಲಿ ನಗುವಾಗಬೇಕೆಂಬ ಹುಚ್ಚು ಬಯಕೆ ಬಿಟ್ಟು ನನ್ನ ತಂದೆಯ ಮಡಿಲಲ್ಲಿ ಮಲಗಬೇಕೆಂಬ ಆಸೆ
ಅವರ ಮಡಿಲಲ್ಲಿ ನನ್ನ ಕಣ್ಣಗಳನ್ನ ಮುಚ್ಚಿಕೊಂಡು
ಯಾರಿಗೂ ತೋರದೆ ನಿಮ್ಮ ನಗುವ ನೋಡುತ್ತಾ
ನಾನೊಮ್ಮೆ ಸಾಯಬೇಕೆಂಬ ಆಸೆ ಅದೇ ನಿಮ್ಮ
ಮಡಿಲಲ್ಲಿ ಮಗುವಾಗಿ
ಆ ಮಗುವಿನಂತೆ ಸಾವಿನ ಕನಸು ಕಾಣುತ್ತಾ
ಆಗಸದಲ್ಲಿ ಚುಕ್ಕೆಯಾಗಿ
ಅಲ್ಲಿಂದ ನಿಮ್ಮ ನಗು ನೋಡಬೇಕೆಂಬ ಹುಚ್ಚು ಬಯಕೆ ನನ್ನದು.
ಅಪ್ಪಾಯೆಂದರೆ ಆಕಾಶ ತಾನೇ
ಪ್ರೀತಿಯ ಅಪ್ಪನಿಗೆ
ಪ್ರೀತಿಯ ನಗುವಾಗಿ
ಸಾಯಬೇಕೆಂಬ ಆಸೆ ಮಗುವಂತೆ....
LOve u Pappa... so much....

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು