ಸ್ನೇಹವೆಂಬ ಅದ್ಬುತ ಲೋಕದ ಸಂಚಾರಿಯಾಗಿ

ನನ್ನ ಬದುಕನ್ನ ಪ್ರೀತ್ಸಿಸುವರು ತುಂಬಾ ಜನ
ಆದರೆ ನಾನು ಇಷ್ಟ ಪಡುವ ಜೀವಗಳು ತುಂಬಾ ವಿರಳ ಆ ವಿರಳ ಜೀವಗಳಲ್ಲಿ ನೀವು ಒಬ್ಬರೂ..
ಈ ದಿನ ನಿಮ್ಮದು ಮಾತ್ರವಲ್ಲ ನಮ್ಮದೂ ಸಹ
ನಾನು ಒಬ್ಬ ಮಾನವನಾಗಿ ಅದನ್ನು ಮೀರಿ
ಒಬ್ಬ ಸ್ವಾರ್ಥಹೀನ ಮಾನವನಾಗಿ
ನಿಮ್ಮ ಒಳ್ಳೆಯದನ್ನ ನೆನೆಪಿಸಿಕೊಳ್ಳುವೆ
ನನ್ನ ತಂದೆ ಆಸ್ಪತ್ರೆಯ ಹಾಸಿಗೆಯ
ಮೇಲೆ ಮಲಗಿದಾಗ
ನನಗೆ ಯಾರ ಕೋಪವೂ ಬೇಕಿರಲಿಲ್ಲ
ನನಗೆ ಯಾರ ಸಮಯವೂ ಬೇಕಿರಲಿಲ್ಲ
ನನಗೆ ಯಾರ ಸ್ವಾರ್ಥವೂ ಬೇಕಿರಲಿಲ್ಲ
ಆದರೆ ನಮ್ಮವರೆನಿಸಿಕೊಳ್ಳುವ
ನೀಚ ಮುಖಗಳ ಮುಂದೆ,
ಜನ ತಮ್ಮ ಸ್ವಾರ್ಥಕ್ಕಾಗಿಯೇ ಯೋಚಿಸುವಾಗ,
ನೀವು ನನ್ನ ಜೊತೆಯಾಗಿ ನಿಂತಿದ್ದೀರಿ,
ನನ್ನ ಬದುಕಿನ ಹಲವು ಖುಷಿ ಸಂದರ್ಭಗಳಲ್ಲಿ
ಎಲ್ಲರೂ ಜೊತೆಯಾಗಿ ನಗುತ್ತಿದರೂ
ಆದರೆ ಕಷ್ಟ ಅಂತಾ ಬಂದಾಗ ತುಂಬಾ
ನನ್ನ ಆತ್ಮೀಯರು ಮಾಯವಾಗುತ್ತಿದರು.
ನೀವು ನಗುವಲ್ಲಿಯೂ ದುಃಖದಲ್ಲಿಯೂ ಒಂದಾಗಿ
ಕಷ್ಟದಲ್ಲಿಯೂ ಸುಖದಲ್ಲಿಯೂ ಒಂದಾಗಿ
ನನ್ನ ಜೀವನದ ಸತ್ಯವಾಗಿ ನಿಂತಿದ್ದಿರಿ.
ತುಂಬಾ ಜನರ ಜೀವನದಲ್ಲಿ ನಾನಾಯಿದ್ದಿನಿ
ನನ್ನ ಜೀವನದಲ್ಲಿ ನಿಮ್ಮಂತಹ ಕೆಲವರಿದ್ದಾರೆ.
ನಾನು ತುಂಬಾ ಚಿಕ್ಕವನು ಆದರೂ
ಬದುಕಿನ ಏರಿಳಿತಗಳಲ್ಲಿ ಸಿಕ್ಕ ನಾನು
ಒಬ್ಬ ವ್ಯಕ್ತಿಯಾಗಿ ನಿಮಗೆ ಹರಿಸಬಲ್ಲೆ
ಬದುಕು ನಿಜಸತ್ಯ ಆದರೆ
ಮಿಥ್ಯಗಳ ಕೊನೆಯಾದರೆ ಮಾತ್ರ
ನಿಮ್ಮಲ್ಲಿ ಅದ್ಬುತವಾದ ಶಕ್ತಿಯಿದೆ
ಅದ್ಬುತವಾದ ಪ್ರಭಾವಳಿಯು ತುಂಬಿದೆ
ಕರ್ತವ್ಯನೀತಿಯ ಸಾಕ್ಷಾತ್ಕಾರ ನಿಮ್ಮಲ್ಲಿದೆ
ಬುದ್ದಿಮಟ್ಟದ ಅಪರಿಮಿತಿ ನಿಮ್ಮಲ್ಲಿದೆ
ಪರಿಮಿತಿಗೆ ಸಿಗದ ಅದ್ಬುತತೆ ನಿಮ್ಮಲ್ಲಿದೆ
ಎಲ್ಲರೂ ಒಂದೇಯೆಂಬ ನಿಮ್ಮ ವಿಚಾರ
ನಮ್ಮ ಭೂಮಿಯ ಏಕತೆಗೆ ಸಾಕ್ಷಿ
ನಡೆಯುತ್ತಿರುವ ದಾರಿ ದೂರವಿರಬಹುದು
ನಡೆದ ದಾರಿಯೂ ಸಹ ದೂರವಾಗಿರಬಹುದು
ಆದರೆ ನೀವು ಇಟ್ಟ ಹೆಜ್ಜೆಗಳು ಇತಿಹಾಸವಾಗಬೇಕು
ಎಲ್ಲವನ್ನು ಬಲ್ಲವನ್ನು ನಿಮ್ಮ ಪ್ರತಿಯೊಂದು
ಕಾರ್ಯಗಳಲ್ಲಿಯೂ ಜೊತೆಯಿರುವನು
ಬಯಕೆ ಮತ್ತು ಗುರಿಗಳ
ನಡುವೆ ತುಂಬಾ ಅಂತರವಿದೆ
ನಿಮ್ಮ ಬದುಕು ಗುರಿಯಾಗಬೇಕು
ಯಾಕೆಂದರೆ ಗುರಿ ಮೋಕ್ಷದ ಹಾದಿ
ಮೋಕ್ಷವೆಂದರೆ ಪಡೆದದನ್ನು ಕಳೆದುಕೊಳ್ಳವುದಲ್ಲ
ಶಾಶ್ವತವಾಗಿ ಎಲ್ಲವನ್ನು ಪಡೆದುಕೊಳ್ಳುವುದು
ಶಾಂತಿ, ಪ್ರೀತಿ, ವಿಶ್ವಾಸಗಳ
ಮೂಲಗುರುತುಗಳ
ನಿಮ್ಮ ಹೆಜ್ಜೆಗೆ ಸಾಕ್ಷಿಯಾಗಲಿ
ನಿಮ್ಮಂತಹವರ ಜೀವನ ಮತ್ತೊಬ್ಬರಿಗೆ ಮಾದರಿ
ನಮ್ಮ ದಾರಿಗೆ ದೀವಿಗೆ ನಿಮ್ಮ ಬದುಕಿನ ರೀತಿ
ಕಳೆದದು ಯಾವುದು ನಮ್ಮದಲ್ಲ ಆದರೆ
ಹೋಗಬೇಕಾದ ದಾರಿ ನಮ್ಮದು
ನಮ್ಮ ಕೈ ಹಿಡಿದಿರುವುದು ಎಲ್ಲವನ್ನು ಬಲ್ಲವನ್ನು
ಮಾನವ ಸ್ವಾರ್ಥಿಯಾಗಿ ಕೆಲವುದನ್ನು ಮರೆಯಬಹುದು ಆದರೆ
ನಿಮ್ಮಲ್ಲಾ ಒಳ್ಳೆಯ ಕೆಲಸಗಳಿಗೆ
ಎಲ್ಲವನ್ನು ಬಲ್ಲವನೇ ಸಾಕ್ಷಿ
ನಿಮಗೆ ಜನ ಮೋಸ ಮಾಡಬಹುದು
ಆದರೆ ನೆನೆಪಿರಲಿ ಅದ್ಬುತವಾದ ವ್ಯಕ್ತಿತ್ವಗಳು
ಯಾವತ್ತು ವಜ್ರಗಿಂತ ಅಮೂಲ್ಯ
ಮುಖವಾಡಗಳ ಜನರ ನಡುವೆ
ನಿಮ್ಮ ನೇರಾನೇರತೆಯ ಬಗ್ಗೆ ನನಗೆ ಹೆಮ್ಮೆಯಿದೆ
ನಿಮಗೆ ಏನೂ ಕೊಡುವಷ್ಟು ನಾನು ದೊಡ್ಡವನಲ್ಲ
ಆದರೆ ನನ್ನ ಪವಿತ್ರ ಅತ್ಮದಿಂದ
ನಿಮಗೆ ಎಲ್ಲವನ್ನು ಹರಿಸಬಲ್ಲೆ...
ನಿಮ್ಮ ಸಹಾಯಹಸ್ತ ಕಲ್ಪತರುವಾಗಲಿ
ನಿಮ್ಮ ಸ್ನೇಹ ನನಗೆ ದಿನವೂ ಹಸಿರು
ನಿಮ್ಮ ಖುಷಿ, ನಗುವಲ್ಲಿ ನನಗೆ ಜಾಗಬೇಡ
ಆದರೆ ಕಷ್ಟ, ದುಃಖವಿದ್ದರೆ ನಾನು ಇದ್ದೇಯಿರತ್ತಿನಿ
ಸಂದೇಹ ಬೇಡ, ನಿಮ್ಮ ನೋವಲ್ಲಿ ನಗುವಷ್ಟು
ಬೆಳೆದ ಸ್ವಾರ್ಥ ಮನಸ್ಸು ನನ್ನಲ್ಲಿಯಿಲ್ಲ.
ನಿಮ್ಮ ದಾರಿಯಲ್ಲಿ ಸೊಗಸುತನವಿರಲಿ
ನಿಮ್ಮ ಕನಸುಗಳಲ್ಲಿ ಸಿಹಿಯಿರಲಿ
ನಿಮ್ಮ ಬದುಕು ಹಸಿರಾಗಲಿ
ನಿಮ್ಮೆಲ್ಲಾ ವಿಚಾರಗಳು ದಾರಿ ಕಾಣಲಿ
ನಿಮ್ಮ ಒಳ್ಳೆಯ ದಾರಿಗೆ ಎಲ್ಲವನ್ನು ಬಲ್ಲವನ್ನು
ಜೊತೆಯಾಗಿ ನಿಲ್ಲುವಂತಾಗಲಿ
ಪರೋಪಕಾರರ್ಥಂ ಇದಂ ಶರೀರಂ
ನಿಮ್ಮ ಮುಂದೆ ಇದರ ಅರ್ಥ ಸಾಕ್ಷಾತ್ಕಾರ
ನಾನು ಪುಣ್ಯದ ಜೊತೆ ಹುಟ್ಟಿರುವೆ
ಯಾಕೆಂದರೆ ನಿಮ್ಮಂತಹವರ ಸ್ನೇಹ
ಅಷ್ಟಪುಣ್ಯಗಳಲ್ಲಿ ಒಂದು
ನಂಬಿಕೆ, ಪ್ರೀತಿ ಇವುಗಳನ್ನ ಮೀರಿ
ಎಲ್ಲವನ್ನು ಬಲ್ಲವನ್ನು ನೆಮ್ಮದಿ ನೀಡಲಿ
ನಿಮಗೆ ನಾನು ಮಾತುಗಳಲ್ಲಿಯೇ ಮುಗಿಸಲಾರೆ
ಕರ್ತವ್ಯನಿರತಂ ಪುಣ್ಯಂ
ನಿಮ್ಮ ಬದುಕಿನ ಒಂದು ಅದ್ಬುತವಾದ
ತಿರುವಿಗೆ ಸಾಕ್ಷಿಯಾಗಿ ನಿಲ್ಲುವೆ....
Baba bless uuu....
Many more happiest returns of the day my dear bro, stay blessed forever,
Iam very gland to having a such caring helping bro like u....
No one replace ur place in my heart..
Don't forget to smile
Keep smiling....

Baba bless uuuuuuuuuuuuuuuuuuu...
Iam blessed friend....

PRAVEEN.....

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Thanks for showing your love and support... yours siddugp

ಪ್ರಚಲಿತ ಪೋಸ್ಟ್‌ಗಳು