ಜೀವನದಲ್ಲಿ ಒಬ್ಬ ಗೆಳೆಯ

ಬದುಕು ಸಾಗುವ ದಾರಿಯಲ್ಲಿ
ಕೈ ಹಿಡಿಯುವ ಒಂದು ಕೈ ಗೆಳೆತನ
ಯಾವ ನದಿ ಯಾವುದೋ ಸಾಗರವನ್ನು ಸೇರುವಂತೆ
ಸಾಗರದ ಅಲೆಗಳು ಯಾವುದನೋ ಅರೆಸುವಂತೆ
ಎಲ್ಲವೂ ಕಳೆದು ಎಲ್ಲವೂ ಸಿಗುವಂತೆ
ಅಜ್ಞಾನ ಅಳೆದು ಸುಜ್ಞಾನ ಬೆಳೆಯುವಂತೆ
ನಿಮ್ಮ ಸ್ನೇಹವು ಮಧುರ ಜೇನಿನ ಗೂಡಿನಂತೆ
ಗಟ್ಟಿ ಬಂಧದ ದಾರಿಯಿರದಿದ್ದರೂ
ಗಟ್ಟಿ ಸ್ನೇಹದ ನಂಟು ಜೊತೆಯಾಗಿದೆ
ಕಾಳಜಿ ಮಧುರತೆಯ ಮಧುವಾದರೂ
ಸ್ನೇಹವೂ ಜೇನಿನಂತೆ ಒಟ್ಟುಗೂಡಿಸಿದೆ
ಎಲ್ಲವೂ ಸಿಗದ ಎಲ್ಲವೂ ಸಿಗುವ
ಕೂಡು ಕಳೆದ ಬಂಧಗಳ ಒಟ್ಟು ಅಂಶವೇ ನಿಮ್ಮ ಸ್ನೇಹ.
ನಿಮ್ಮ ಜೀವನದ ದಾರಿಯಲ್ಲಿ ಸಾವಿರ ಕನಸುಗಳು ಚೆಲ್ಲಿದರೂ, ಒಳ್ಳೆಯ ದಾರಿಯಲ್ಲಿ ಬಾಬಾ ಇರುವಂತೆ
ಸಾಗಲಿ ನಿಮ್ಮ ಪಯಣ
ಸೇರಿದ ನಿಮ್ಮ ದೇಹದಲ್ಲಿ
ಹೊಗಳಿಸಿಕೊಳ್ಳಲಿ ಅತ್ಮ
ನಿಮ್ಮ ಭವಿಷ್ಯದ ಯೋಜನೆಗಳು
ಅದ್ಭುತ ಬೆಳಕು ಕಾಣಲಿ.
ಸಾಗಿದ ನಿಮ್ಮ ಬದುಕಿನ ಪ್ರತಿ ಅನುಭವಗಳು
ಮತ್ತೋಬ್ಬರ ಜೀವನದ ದಾರಿದೀಪವಾಗಲಿ
ಎಲ್ಲೋ ಹುಟ್ಟಿ ಬೆಳೆದು ಸೇರಿದ
ಸ್ನೇಹವು ಮಧುರವಾಗಲಿ
ಅಲುಗದ ಗಟ್ಟಿ ಕಲ್ಲಿನ ಬುನಾದಿಯಾಗಲಿ
ನಿಮ್ಮ ಹಬ್ಬವೂ ನಮ್ಮಗೂ ಖುಷಿಯಾಗಲಿ
ನಿಮ್ಮ ನಗು ನಮ್ಮಗೂ ಹೆಮ್ಮೆಯಾಗಲಿ
ನಿಮ್ಮ ಕನಸುಗಳು ನಮ್ಮಗೂ ದಾರಿಯಾಗಲಿ
ನಿಮ್ಮ ಬದುಕು ನಮ್ಮಗೂ ಮಾದರಿಯಾಗಲಿ
ನಿಮ್ಮ ಬಾಳಪಥ ನಮ್ಮಗೂ ದೀವಿಗೆಯಾಗಲಿ
ನಿಮ್ಮ ಅನುಭವಗಳು ನಮ್ಮಗೂ ಧೈರ್ಯವಾಗಲಿ
ಹರಿಸುವ ಕೈಗಳ ಬಿಂಬವು ಕಣ್ಮರೆಯಾಗದಿರಲಿ
ಹಾತೊರೆಯುತ್ತಿರುವ ಜೀವನದ ಕನಸುಗಳು ಮರೆಯಾಗದಿರಲಿ
ನಡೆದು ಬಂದದು ಸಾವಿರ ಮೈಲುಗಳು
ಮರೆಯದಿರಿ ಒಂದೇ ಬದುಕು
ಸಾವಿರಾರು ಬದುಕುಗಳಿಗೆ ಬೆಳಕಾಗಬೇಕು
ಸೋತರೂ ನಿಲ್ಲದಿರಿ ನಿಮ್ಮ ಹಿಂದೆ
ಕನಸು ಹೊತ್ತ ಸಾವಿರ ಕಣ್ಣುಗಳಿವೆ
ಬಿದ್ದರೂ ನಿಲ್ಲದಿರಿ ನಿಮ್ಮ ಹಿಂದೆ
ಕೈ ಹಿಡಿಯುವ ಸಾವಿರ ಕೈಗಳಿವೆ
ಸಾಗಲಿ ನಿಮ್ಮ ಬದುಕು
ದಾರ್ಶನಿಕ ಕಂಡ ದರ್ಶನದ ಕಡೆಗೆ
ಬದುಕುವೆಂಬ ಅದ್ಬುತ ಸತ್ಯದ ಕಡೆಗೆ
ಮಿಥ್ಯ ತುಳಿದು ನಿಲ್ಲುವ ಗೆಲುವಿನ ಕಡೆಗೆ
ನನ್ನ ಎಲ್ಲವನ್ನು ಬಲ್ಲವನೇ
ಅವರ ಸಾವಿರ ಕನಸುಗಳು ನಿಮ್ಮ ಜವಾಬ್ದಾರಿ
ಅವರ ಜನ್ಮವೂ ಸಾರ್ಥಕತೆಯನ್ನ ಕಾಣಲಿ
ನಿಮ್ಮ ಜನ್ಮದಿನವೂ ನಮ್ಮಗೂ ಖುಷಿಯೂ
ಒಂದು ಒಳ್ಳೆಯ ಜೀವನದಲ್ಲಿ
ಒಬ್ಬ ಒಳ್ಳೆಯ ಗೆಳೆಯನ ಕಾಣಿಕೆಯು
ಸಾರ್ಥಕವಾಯಿತು ನನ್ನ ಅದ್ಬುತ ಬದುಕು
ಸಾವಿರ ನೋವು ನೋಡಿದರೂ ಅಳಿಯದೆ
ಉಳಿಯುವ ಜೀವನದ ಸ್ನೇಹವೂ....
ಎಲ್ಲವನ್ನು ಬಲ್ಲವನ್ನ ಬೆಳಕು ನಿಮ್ಮಗೆ ದಾರಿದೀಪವಾಗಲಿ
ನಿಮ್ಮ ಬೆಳೆವಣಿಗೆ ನಿಮ್ಮಷ್ಟು ನಮ್ಮಗೂ
ಖುಷಿ ಕೊಟ್ಟಿದೆ ಮತ್ತು ಕೊಡುತ್ತೆಯೂ ಸಹ..
ಆರಾಧನೆಯ ಬೆಳಕು ನೀವಾಗಿ ಹೊಮ್ಮಿ
ಈ ಸ್ನೇಹವನ್ನು ಮರೆಯದೆ...
ನನ್ನ ನಂಬಿಕೆಗಳ ಹಾರೈಕೆಯೊಂದಿಗೆ.....

WISH UUUU HAPPIEST BIRTHDAY DEAR FRIENDS AJAY and ABHILASHA..
Stay blessed dr, BABA bless uuuuuuuuuuuuuuuuuuu........


ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು