ಬದುಕುವುದನ್ನ ಕಲಿಯುವುದು ಹೇಗೆ ?

ಬದುಕಿನ ನೂರು ಬಾರಿ ದಾರಿಯಲ್ಲಿ ಕುಳಿತು ಯೋಚಿಸುವಾಗ ಹಲವು ಪ್ರಶ್ನೆಗಳು ಹಲವು ರೀತಿ ಒದಗಿದರೂ, ಮೂಡಿದ ಪ್ರಶ್ನೆ ಒಂದೇ ಬದುಕುವುದು ಹೇಗೆ, ಹಲವು ಜನರ ಮನದ ಭಾವಗಳು ಬೇರೆಯಾದರೂ, ಅವರ ಬದುಕಿನ ಉದ್ದೇಶಗಳು ಸಹ ಬೇರೆಯಾಗುತ್ತಾ ಹೋಗುತ್ತವೆ. ನಡೆಯುತ್ತಾ ನಡೆಯುತ್ತಾ ಹಲವು ಪಾತ್ರಗಳು ಬದಲಾಗುತ್ತಾ ಹೋಗುತ್ತವೆ. ನಡೆಯುವ ದಾರಿ, ಸಾಗಿದ ಪಯಣ ಎರಡರ ನಡುವೆ ಒಂದೇ ಉದ್ದೇಶ ಬದುಕಿನ ದಾರಿಯಲ್ಲಿ ಒಳ್ಳೆಯದರ ಗುರುತು ಸಿಗಬೇಕು ಎಂಬ ನಂಬಿಕೆ ಅಷ್ಟೇ. ಹಲವು ಬಾರಿ ಜನ ತುಂಬಾ ಯೋಚಿಸುತ್ತಾ ಅವರಲ್ಲಿನ ನಂಬಿಕೆನ್ನ ಳೆದುಕೊಳ್ಳುತ್ತಾರೆ. ಬದುಕಿನಲ್ಲಿ ಹಲವು ರೀತಿಯ ಸಮಸ್ಯೆಗಳನ್ನ ಎದುರಿಸುವ ಜನ ತಮ್ಮ ನಿಜವಾದ ಸಾಮರ್ಥ್ಯದ ಬಗ್ಗೆ ಮರೆತು ಬಿಡುತ್ತಾರೆ ಆದರೆ ಜವಾಬ್ದಾರಿಗಳ ಕಠಿಣವಾದ ಹೊಡೆತ ಬದುಕನ್ನ ನಿಜವಾದ ರೀತಿಯಲ್ಲಿ ಬದಲಿಸಬಲ್ಲದು. ಒಂದು ನಿಜವಾದ ವ್ಯಕ್ತಿತ್ವ ಹೊರಬರುವುದು ಅವರು ಅನುಭವಿಸಿದ ಕಷ್ಟಗಳ ಮೇಲೆ ಮತ್ತು ಅವರು ತೆಗೆದುಕೊಳ್ಳುವ ಕಠಿಣವಾದ ನಿರ್ಧಾರಗಳ ಮೇಲೆ. ಗೌರವ, ಪ್ರೀತಿ, ನಿರ್ಧಾರಗಳು ಮತ್ತು ಮನಸ್ಸಿನ ಶಕ್ತಿ ಬದುಕನ್ನ ಕಲಿಸಬಲ್ಲವು. ಸುತ್ತವ ಗಾಳಿಗೂ ಮತ್ತು ಹರಿಯುವ ನೀರಿಗೂ ತುಂಬಾ ವ್ಯತ್ತಾಸ ಇರದಿರಬಹುದು ಆದರೆ ಅವುಗಳು ಯಾವತ್ತು ಬೇರೆನೇ ಯಾಕೆಂದರೆ ಒಂದು ಜೀವ ಕೊಡಬಲ್ಲದು, ಒಂದು ಜೀವನ ನಡೆಸಬಲ್ಲದು, ಬದುಕಿನ ಬೆಲೆ ಅರ್ಥವಾಗುವುದು, ನಿರ್ದಿಷ್ಟವಾದ ಸಂದರ್ಭಗಳ ಮೇಲೆ ಆದರೆ ನಿಜವಾದ ಬದುಕಿನ ಅರ್ಥ ಒಂದು ಖುಷಿಯನ್ನ ಸಂಪಾದಿಸುವುದೇ ಆಗಿದೆ. ನಮ್ಮ ಬದುಕು ಯಾವತ್ತು ಸೋಲನ್ನ ಕೊಡಲಾರದು ಅದನ್ನ ತೆಗೆದುಕೊಳ್ಳುವ ನಮ್ಮ ಮನಸ್ಥಿತಿಗಳು ಬೇರೆಯಾಗಿರುತ್ತದೆ. ನಮ್ಮ ಬದುಕು ನಮಗೆ ಪಾಠ ಕಲಿಸುತ್ತೆ ಅಷ್ಟೇ. ಒಂದರ ನಂತರ ಒಂದು ಬದಲಾವಣೆಗಳು ನಮ್ಮ ನಿಜವಾದ ಬದುಕನ್ನ ಪ್ರಶ್ನಿಸಬಲ್ಲದು ಆದರೆ ಅದರ ಉತ್ತರ ನಾವೇಯಾಗಿರುತ್ತೆವೆ. ಯಾವುದೇ ಖುಷಿಯಾಗಲಿ ಅಥವಾ ದುಃಖವಾಗಲಿ ಅದನ್ನ ಅನುಸರಿಸುವ ರೀತಿಯಲ್ಲಿ ನಾವು ಕೆಲವೊಮ್ಮೆ ಸೋಲಬಹುದು ಆದರೆ ಅದು ನಿಜವಾದ ದಾರಿಯನ್ನು ತೋರಿಸಬಲ್ಲದು. ನಗು ಮತ್ತು ಶಾಂತಿ ನಮ್ಮ ಬದುಕಿನ ಎರಡು ಮುಖ್ಯ ಅಂಶಗಳು. ಶಾಂತಿ ಬದುಕಲ್ಲಿ ಅಡಗಿರುವ ಎಲ್ಲಾ ಸತ್ಯಗಳನ್ನು ಹೊರಗೆ ತರಬಲ್ಲದು ಮತ್ತು ನಿಜವಾದ ಜ್ಞಾನವನ್ನು ಸಂಪಾದಿಸಲ್ಲು ಸಹಕಾರಿಯಾಗುವುದು. ಎಲ್ಲವನ್ನು ಸಾಧಿಸಿದ ವ್ಯಕ್ತಿಗೆ ಅವನ ಮನಸ್ಸಲ್ಲಿ ಮೂಡುವ ತುಂಬಾ ಪ್ರಶ್ನೆಗೆ ಉತ್ತರ ಕೊಡಲ್ಲು ಒದ್ದಾಡುತ್ತಿರುತ್ತಾನೆ, ಆದರೆ ಅವನ ನಿಜವಾದ ಸಾಧನೆ ನಿರ್ಧಾರವಾಗುವುದು ಅವನ ಸಾಧನೆಗಳ ಮೇಲಲ್ಲ ಮಿಗಿಲಾಗಿ ಅವನು ಕಂಡುಕೊಂಡ ಅವನ ಬದುಕಿನ ಸಾರ್ಥಕತೆಯ ಮೇಲೆ ಎಂದು ಮರೆಯದಿರಿ. ನೀವು ಎಷ್ಟೇ ದೂರ ಸಾಗಿದರೂ, ಸಾಗಿದ ದಾರಿಯನ್ನ ಮರೆಯದಿರಿ ಯಾಕೆಂದರೆ ನಿಜವಾದ ಗುರು ನೀವು ಸಾಗಿದ ದಾರಿಯೇಯಾಗಿದೆ. ಕಲಿಕೆ ಶುರುವಾಗುವುದು ಈ ಪುಟ್ಟ ಪುಟ್ಟ ಹೆಜ್ಜೆಗಳಿಂದ ನನಗೆ ಯಾವುದು ಗೊತ್ತಿಲ್ಲಯೆಂದು ಅರಿತವನ್ನ ನಿಜವಾದದನ್ನ ಗಳಿಸಿರುತ್ತಾನೆ. ಒಬ್ಬ ವ್ಯಕ್ತಿಯ ಯೋಚನೆಗಳನ್ನ ಅವನ ಅಂತರಿಕತೆಯ ಮೇಲೆ ನಿರ್ಧಾರ ಮಾಡಲಾಗದು, ಒಂದು ಒಳ್ಳೆಯ ಗುರಿಗಳು ಮನಸ್ಸಿನ ಆಳದಲ್ಲಿ ಶಿಲ್ಪವಾಗಿರುತ್ತವೆ. ಅವುಗಳ ಸಾಕಾರತೆಯು ಸಹ ಬದುಕನ್ನ ಬದುಕಿಸಲು ಸಾಧ್ಯ. ವೇದದ ಜ್ಞಾನಯೋಗವು ಎಲ್ಲವನ್ನು ಪ್ರತಿಬಿಂಬಿಸಬಲ್ಲದು. ಅರಿತು ನಡೆದ ವ್ಯಕ್ತಿ ನಿಜವಾದ ಬದುಕನ್ನ ಪಡೆಯಬಲ್ಲ ಎಂಬುವುದು ನಿಜ ಸತ್ಯ. ಮನೆಯ ಮೂಲೆಯಲ್ಲಿ ಕುಳಿತ ಕಸ ಮುಂದೊಮ್ಮೆ ರಸವಾಗಬಹುದು ಆದರೆ ಅದರಲ್ಲಿ ಅಡಗಿರುವ ಸಾಮರ್ಥ್ಯವನ್ನ ಮರೆಯದಿದ್ದರೆ ಮಾತ್ರ. ಹುಟ್ಟುವ ಸೂರ್ಯ ನಮ್ಮ ಬದುಕನ್ನ ಪ್ರಶ್ನೆ ಮಾಡುತ್ತಾನೆ, ಈ ದಿನದ ಗುರಿಯೆನ್ನೆಂದು ಆದರೆ ಅದೇ ಸೂರ್ಯ ಮುಳುಗುವಾಗ ತೆಗೆದುಕೊಂಡು ಹೋಗುವ ಉತ್ತರಗಳು ಮಾತ್ರ ನಿರಾಸದಾಯಕ. ಒಮ್ಮೆ ಯೋಚಿಸಿ ಬದುಕನ್ನ ಕಲಿಯುವುದು ಹೇಗೆಯ್ನ್ನವುದಕ್ಕಿಂತ ನಿಮ್ಮ ಪ್ರತಿ ದಿನದಲ್ಲಿಯೂ ನೀವು ಕೊಡುವ ಸಾರ್ಥಕತೆಯ ಬಗ್ಗೆ ಯೋಚಿಸಿ ಆಗ ಮಾತ್ರ ನಿಜವಾದ ಸುಖನಿದ್ದೆಯನ್ನು ಅನುಭವಿಸಬಲ್ಲಿರಿ. ಸಮಾಜಕ್ಕಾಗಿ ಮಿಡಿಯದ ಉಸಿರು, ಮತ್ತೊಬ್ಬ ವ್ಯಕ್ತಿಗೆ ನೆರವಾಗದ ದೇಹ, ಜಗದ ದುಃಖಕ್ಕೆ ಸ್ಪಂದಿಸದ ಮನಸ್ಲು ಯಾವ ಬದುಕಿನ ಮೌಲ್ಯಕ್ಕೂ ಸರಿಸಾಟಿಯಾಗಲಾರದು. ನಾನೇಷ್ಟು ಸರಿಯೆನ್ನವ ಯೋಚನೆಗಳಿಗಿಂತ ನಾವು ಶ್ರೇಷ್ಟ ಸಮಾಜದ ಕುರುಹುಗಳೆಂದು ಹೆಮ್ಮೆ ಪಟ್ಟಾಗ ಈ ಸಮಾಜ ಮತ್ತು ನಮ್ಮ ಬದುಕು ಸಾರ್ಥಕ. ಒಂದು ಹೆಜ್ಜೆ, ಒಂದು ಉಸಿರು, ಒಂದು ನಿರ್ಧಾರ ಬದುಕನ್ನ ಬದಲಿಸಬಲ್ಲದು. ಸಾಗಲಿ ನಿಮ್ಮ ಬದುಕು ಸಾರ್ಥಕತೆಯ ಉಸಿರಿನ ಕಡೆಗೆ, ಸಮಾಜ ಕಂಡ ಕನಸುಗಳ ಕಡೆಗೆ, ಒಬ್ಬ ಶ್ರೇಷ್ಟ ವ್ಯಕ್ತಿಯಾಗುವ ಯೋಚನೆಯ ಕಡೆಗೆ. ಇದೇ ತಾನೇ ಬದುಕಿನ ದಾರಿ, ಬಿದ್ದರೂ ಸೋಲದಿರಿ ಯಾಕೆಂದರೆ ಬದುಕನ್ನ ಪಡೆದಿರುವುದೇ ಒಂದು ನಿಜವಾದ ಗೆಲುವುಯೆನ್ನವುದು ನಿಜಸತ್ಯ. ನಾನು ಒಬ್ಬ ಮನುಷ್ಯಯನ್ನವ ಯೋಚನೆ ಮೀರಿ ಯೋಚಿಸಿ ಯಾಕೆಂದರೆ ದೇವರು ನೀನೊಬ್ಬ ಶ್ರೇಷ್ಟಯೆಂದು ಪ್ರತಿಪಾದಿಸುತ್ತಾನೆ. ಅದ್ವೈತ ತತ್ವಗಳಲ್ಲಿ ನಾವೆಲ್ಲರೂ ದೇವರು ಎನ್ನುವದನ್ನ ಮರೆಯದಿರಿ. ಸತ್ತದ ದಾರಿ ಕಷ್ಟವಾದರೂ ಎದುರು ನಿಂತು ನೋಡಿ ಆಗ ಗೊತ್ತಾಗುವುದು ನಿಮ್ಮ ನಿಜವಾದ ಸಾಮರ್ಥ್ಯ ಮತ್ತು ನೀವು ಅನುಭವಿಸಿದ ಕಷ್ಟಗಳ ಮೌಲ್ಯ. ಎಲ್ಲರೂ ಶ್ರೇಷ್ಟರೂ ಹಾಗೆ ಈ ಮನಸ್ಸುಗಳ ಯೋಚನೆಗಳು ಸಹ ಅರಿತು ನಡೆಯಿರಿ, ಕಲಿಯುವ ದಾರಿ ನಿಮ್ಮದಾದರೂ, ನಿಮ್ಮನ್ನ ಗಟ್ಟಿ ಮಾಡುವ ಸಂಕಲ್ಪ ದೇವರದು. ಬದುಕು ಕಷ್ಟವಾದರೂ ಒಮ್ಮೆ ಉಸಿರು ಎಳೆದುಕೊಂಡು ನೋಡಿ ನಿಮ್ಮ ಬದುಕು ಎಷ್ಟು ಪವಿತ್ರವೆಂದು ಆ ಸಂದರ್ಭ ಕಲಿಸಬಲ್ಲದು. ಕಲಿಕಿ ಸಾಗಲಿ ಜೊತೆಗೆ ಬದುಕು ಸಹ ಹೆಜ್ಜೆಯಾಗಲಿ, ನಮ್ಮ ಸಮಾಜದ ಮೌಲ್ಯಗಳ ಸಹ ಆ ಹೆಜ್ಜೆಗೆ ಸಾಕ್ಷಿಯಾದಾಗ ಮಾತ್ರ ಈ ಬದುಕು ಸಂಪೂರ್ಣವಾಗಬಲ್ಲದು ಅದರ ಗುರಿಯೊಂದಿಗೆ....

                     ಇಂತಿ ನಿಮ್ಮ ಪ್ರೀತಿಯೊಂದಿಗೆ
                      ನಿಮ್ಮ SIDDUGP

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು