ಬದುಕಿನ ಪಯಣದ ಅರ್ಥ

ನವಮಾಸಗಳೊಂದಿಗೆ ತಾಯಿಯ ಉದರದಲ್ಲಿ ಎಲ್ಲವನ್ನು ನಿಶ್ಚಯ ಮಾಡಿಕೊಂಡು ಹುಟ್ಟುತ್ತೆವೆ ಆದರೆ ಕಾಲ ಎಲ್ಲವನ್ನು ಬದಲಿಸಿ ಬಿಡುತ್ತೆ. ನಮ್ಮ ವಿಚಾರಗಳು, ಪರಿಕಲ್ಪನೆಗಳು, ಭಾವನೆಗಳು ಹಾಗೂ ಸಂದರ್ಭಗಳು ನಮ್ಮನ್ನ ಪರಿತಪಿಸುವತ್ತ ಕರೆದೊಯ್ಯತ್ತವೆ.
ಬದುಕು ಶುರುವಾಗುತ್ತಾ ಬದುಕಿನ ನಿಜ ಅರ್ಥ ಮರೆತು ಬಿಡುತ್ತೆವೆ. ನಮ್ಮ ಬದುಕಿನ ಸಿಹಿಗಳಿಗೆಯೆಂದರೆ ಆ ನಿಜ ಸತ್ಯವನ್ನು ಅರಿಯುವುದು.
ನಾನು ಹೇಳ ಹೊರಟಿರುವುದು ಒಂದು ಅನೀರಿಕ್ಷಿತವಾದ ಪಯಣದಲ್ಲಾದ ಅಪರಿಮಿತ ಸತ್ಯಗಳ ದರ್ಶನ. ನಾನು ಅಲ್ಲಿ ಕಂಡ ಬದುಕಿನ ಸತ್ಯ ಸಂಗತಿಗಳೊಂದಿಗೆ ನಮ್ಮನ್ನ ಬದುಕಿನ ನಂಟು, ಬದುಕಿನ ಅರ್ಥ ಮತ್ತು ಅದರ ಒಳ ಹೊರ ನೋಟದ ಪರಿಕಲ್ಪನೆ ಅದ್ಭುತ ಪರಿಚಯ ನಾನು ಮಾಡಿಸುವೆ

ಹಳ್ಳಿಯ ವಾತಾವರಣ, ನೂರು ಜನರಲ್ಲಿಯೂ ನೂರು ಬಗ್ಗೆಯ ವರ್ತನೆ ಮತ್ತು ಸಾವಿರ ಬಗ್ಗೆಯ ವಿಚಾರಗಳು ಮತ್ತು ಬುದ್ದಿಮತ್ತೆ. ಅದರ ಜೊತೆ ಮಾತು, ವಿಶೇಷವಾದ ಸಂರ್ದಶನದಲ್ಲಾದ ಬದಲಾವಣೆ. ಹಳ್ಳಿಯೆಂದರೆ ಇಲ್ಲ ಅಲ್ಲಗಳಲ್ಲಿದ ಬೆಲ್ಲವದು, ಹೌದು, ಸಾವಿರ ಜನ ಎದುರು ನಿಂತರೂ ಎಲ್ಲವನ್ನು ನಿರ್ವಹಿಸಬಲ್ಲ ಚತುರತೆ ಅವರಲ್ಲಿಯೇ ಮೇಲು, ಆದರೆ ನಾನು ಕಂಡ ಅಲ್ಲಿಯ ಚಿಂತನೆಯೆಂದರೆ ಸಿಹಿ ಬೆಲ್ಲಕ್ಕೆ ಬೇವಾದರೂ ಸಂಬಂಧಗಳ ನಲುಮೆ ಅವರಿಗೆ ಇಷ್ಟ. ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆ, ತಮ್ಮವರೆಂಬ ಭಾವನೆ ಅವರಲ್ಲಿ ತುಂಬಾ ಹೆಚ್ಚು. ನಾನು ಕಂಡ ಅವರ ಪ್ರೀತಿ ಮುಂದೆ ಶೂನ್ಯ ಏಕೆಂದರೆ ನಾನು ಯಾರೆಂಬ ಪರಿಚಯವಿಲ್ಲದ ಜನ ನನ್ನ ಆಹ್ವಾನಿಸಿದ ಪರಿ ನನಗೆ ತುಂಬಾನೇ ಇಷ್ಟವಾಯಿತು. ಆರು ತಿಂಗಳ ಹಿಂದೆ ದ. ರಾ. ಬೇಂದ್ರೆಯವರ ಮೊಮ್ಮಗಳಾದ ಪುರ್ನವಸು ಅವರು ನನ್ನ ಮಾತುಕತೆಗೆ ಸಿಕ್ಕಾಗ ಅವರು ಹೇಳಿದ ಸಂಬಂಧದ ಒಂದು ಸಿಹಿ ಮಾತು ನನ್ನ ನೆನೆಪಿನ ಗೋಡೆಯ ಮೇಲೆ ಇನ್ನೂ ಅಚ್ಚಾಗಿದೆ, ಅವರು ಪುಣೆಯವರಾದರೂ, ಸಂಬಂಧದ ಗಟ್ಟಿಮೇಳದಲ್ಲಿ ಮೌನ ಯಾವಾಗಲೂ ರಾಗವಾಗಿರುತ್ತೆಯೆಂಬ ಅವರ ಕಲ್ಪನೆ ನನ್ನ ಮೌನದ ವಿಚಾರಕ್ಕೆ ಮಾತಾಯಿತ್ತು. ಹುಟ್ಟುತ್ತಾ ಎಲ್ಲರ ವಿಚಾರಗಳು ಬೇರೆ ಬೇರೆ ಆದರೆ ಆ ಎಲ್ಲ ವಿಚಾರಗಳಲ್ಲಿ ಅಡಗಿರುವ ಸತ್ಯ ಒಂದೇ. ಮೌನದ ಚಿನ್ನದಲ್ಲಿ ಯಾವುದು ಸಲೀಸಾಗಿ ಸಿಗಲಾರದು ಆದರೂ ಯಾವುದು ಅಸಾಧ್ಯವಲ್ಲ.

ಒಂದು ಪುಟ್ಟ ಮಗು ಚೆನ್ನಾಗಿ ಬೆಳೆಯುತ್ತಾಯಿತ್ತು ಆದರೆ ಆ ಮಗುವಿನ ಬದುಕಿನಲ್ಲಿ ಒಂದು ಅನೀರಿಕ್ಷಿತವಾದ ತಿರುವು ಪಡೆಯಿತ್ತು. ಎಲ್ಲವನ್ನು ಸಹಿಸಿಕೊಳ್ಳುವಷ್ಟು ಆ ಮಗುವಿನಲ್ಲಿ ಉದ್ಬವಿಸಿದ ವಿಚಾರ ಮತ್ತು ಸಮಾಜ ಎದುರಿಸಿ ನಿಲ್ಲುವ ಶಕ್ತಿ ನೀಡಿದು ಆ ಮಗುವಿನಲ್ಲಿ ಅಡಗಿದ ಅದ್ಬುತ ಅತ್ಮ ಪ್ರಕಾಶ. ಎಲ್ಲಿಯೂ ಹೊರಗೆ ಹೋಗದಂತಹ ಸಂದರ್ಭ, ಸಮಾಜದ ಕೀಳು ಮಾತು, ಬದುಕೇ ನಾಶವೆಂಬ ಅವರ ವರ್ತನೆ, ಎಲ್ಲವೂ ಅಸತ್ಯಗಳ ಸತ್ಯವೇ ಸರಿ. ಆ ಮಗು ಮಾತ್ರ ಎಲ್ಲವನ್ನು ಸಹಿಸಿಕೊಂಡು ತನ್ನ ಮೊಗದಲ್ಲಿ ಚಿಕ್ಕ ಮುಗಳ್ನಗೆ ಹೊತ್ತು ತಾನು ಸಾಮಾನ್ಯವೆಂಬ ಭಾವನೆ ಎಲ್ಲವನ್ನು ಮೀರಿದು. ಆಡುವ ವಯಸ್ಸಿನಲ್ಲಿ, ಆಡಂಬರದ ಜಗದಲ್ಲಿ ಆ ಮಗುವಿನ ಪರಿಸ್ಥಿತಿ ಒಮ್ಮೆ ಊಹಿಸಿಕೊಳ್ಳಿ, ನಾಲ್ಕು ಗೋಡೆಗಳ ಒಂದು ಮೂಲೆಯಲ್ಲಿ ಕುಳಿತು ಎಲ್ಲರಿಗೂ ಒಳಿತು ಬಯಸುವ ಆ ಮನಸ್ಸು ದೇವರಿಗೆ ಇಷ್ಟ. ನಾನು ಈ ಮಗುವಿನ ಮುಂದೆ ತುಂಬಾನೇ ಚಿಕ್ಕವನು, ಒಂದು ವಸ್ತು ಪಡೆದುಕೊಳ್ಳುವರೆಗೂ ನಿದ್ರೆ ಮಾಡದ ನನಗೆ ಆ ಮಗುವಿನ ಚಿಕ್ಕ ಬಯಕೆಗಳು ನಾನು ಹೀನನೆಂಬ ಭಾವನೆ ಮೂಡಿಸಿದು ಸುಳ್ಳಲ್ಲ. ದೇವರೇ ನಿನಗೆ ಏನಾದರೂ ಒಳಿತು ಮಾಡುವ ಮನಸ್ಸಿದರೆ ಆ ಮಗುವಿನಲ್ಲಿ ನಗುವಾಗಿ ಖುಷಿಯಾಗಿ ಮೂಡಿ ಬಾ......

ಮಗುವೆಂದರೆ ಖುಷಿ, ತುಂಟತನ ಅಷ್ಟೇ ಅಲ್ಲ, ಆ ಮಗುವಿನಲ್ಲಿಯೇ ಅಡಗಿರುವ ಜ್ಞೌನ, ಅಪರಿಮಿತ ಚಿಂತನಾ ಯೋಚನೆ ಮತ್ತು ಮಾತುಕತೆಯ ಶಕ್ತಿ. ಗೊಂದಲಗಳ ನಡುವೆ ಮಾತುಕತೆ ಮರೆಯಾಗುವದರ ಜೊತೆಗೆ ಎಷ್ಟೊ ವಿಚಾರಗಳು ಮರೆಯಾಗುತ್ತವೆ ಆದರೆ ಮಗುವಿನಲ್ಲಿ ಯಾವ ಗೊಂದಲವಿಲ್ಲದೆ ಮಾತನಾಡಿದ ಅದ್ಭುತ ಶಕ್ತಿ ನನಗೆ ಆಶ್ಚರ್ಯ ಮೂಡಿಸಿತ್ತು. ಅತ್ಮವೆಂದರೆಯೇನು ಮತ್ತು ಅದರ ಅಸ್ತಿತ್ವದ ಪರಿಕಲ್ಪನೆಗಳೇನು? ಉತ್ತರ ಸಿಹಿಯಾಗಿ ಬಂದರೂ, ಅದರಲ್ಲಿ ಅಡಗಿದ ಸತ್ಯ ಅದ್ಭುತದ ಸಿಹಿಯೇ ಸರಿ. ಅತ್ಮವೆಂದರೆ ಸಾವು ಪಡೆದು ಪಡೆಯದ ಮರೆಗುಳಿತನವಂತೆ ಆ ಮಗುವಿನ ಕಲ್ಪನೆಯ ಪ್ರಕಾರ ಮತ್ತು ಅದರ ಅಸ್ತಿತ್ವವೆಂದರೆ ಲೋಕಜ್ಞೌನದೇಹವಂತೆ, ಇದು ನಿಜ, ನಾನು ಹುಡುಕ ಹೊರಟ ಆ ಪ್ರಶ್ನೆಗೆ ಸಿಹಿ ಉತ್ತರವೆಂದರೆ ಲೋಕಜ್ಞೌನದೇಹ, ಅದ್ಭುತ ಹೌದು, ಅತ್ಮ ದೇಹ ತ್ಯಜಿಸಿದ ನಂತರ ಲೋಕ ಸಂಚರಿಸುತ್ತೆ ಹಾಗೆ ದೇಹವನ್ನು ನಿರ್ವಹಿಸುತ್ತೆ ಆದರೆ ಜ್ಞೌನವೆಂಬ ಪ್ರಶ್ನೆ ಬಂದರೆ ನಾಸ್ತಿಕತವದ ಪರಾರ್ಮಶೆ ಚರ್ಚೆಯಾಗುತ್ತೆ, ಅತ್ಮವೆಂದರೆ ಶಾಶ್ವತ, ದೇಹ ತ್ಯಜಿಸಿದ ನಂತರ ಅತ್ಮ ಸ್ವತಂತ್ರ, ಆದರೆ ಹಿಂದಿನ ದೇಹದ ನೆನೆಪುಗಳನ್ನ ಮರೆತು ಬಿಡುತ್ತೆ. ಅದ್ಭುತ ಪರಿಕಲ್ಪನೆಯಾದರೂ ಸೂಕ್ಷ್ಮವಾಗಿ ಅರ್ಥವಾಗುತ್ತೆ.
ಮಕ್ಕಳು ದೇವರಿಗೆ ಸಮಾನವೆಂಬ ಕಲ್ಪನೆ ಸತ್ಯ....

ಹಿರಿಜೀವ ಮತ್ತು ಸಾವಿನ ನಿರೀಕ್ಷಣೆಯಲ್ಲಿರುವ ಜೀವದ ಮೌನದ ಮಾತು ಅತ್ಮಜ್ಞೌನದ ಒಂದು ಹಂತ. ಬದುಕಿನ ಸಾವಿರ ಪ್ರಶ್ನೆಗಳನ್ನ ಆ ಜೀವದ ಮುಂದೆಯಿಟ್ಟಾಗ, ಉಸಿರಿನ ಏರಿಳಿತ ಮತ್ತು ಅವರು ವ್ಯಕ್ತಪಡಿಸಿದ ಉತ್ತರಗಳು ನಿಜಕ್ಕೂ ಪ್ರಶಂಸನೆಯ. ಅವರು ಬದುಕಲ್ಲಿ ಯೌವನ್ಯ ಅನುಭವಿಸುವಾಗ ಎಲ್ಲವನ್ನು ಸಹಿಸಿಕೊಳ್ಳಬಹುದು ಆದರೆ ಯಾವಾಗ ಬದುಕಲ್ಲಿ ಒಂದು ಹಂತ ಮುಗಿಯುತೋ ಆಗ ಎಲ್ಲವನ್ನು ತ್ಯಜಿಸುವ ಕಲ್ಪನೆ ಮನಸ್ಸಲ್ಲಿ ಮೂಡಿಬರುತ್ತೆ. ವಯಸ್ಸು ಮುಗಿಯುತ್ತಾ ದುಃಖದ ಕಂತೆ ಹೆಚ್ಚಾಗುತ್ತೆ. ಜನ ಸ್ವಾರ್ಥಿಯಾಗುತ್ತಾ ವಯಸ್ಸಿನವರ ಕಲ್ಪನೆಗಳನ್ನ ಮರೆಯುತ್ತಾರೆ. ವಯಸ್ಸಿನ ಅಂತ್ಯದಲ್ಲಿ ಅವರು ಪಡೆದ ಜ್ಞೌನ, ಸಂಸ್ಕಾರ ಅವರ ಕೈ ಹಿಡಿಯುತ್ತೆ. ಮೋಕ್ಷದ ದಾರಿಯವರೆಗೂ ನಡೆಸುತ್ತೆ. ಆ ಹಿರಿಜೀವದ ಕಣ್ಣಲ್ಲಿ ಕಂಡ ಮಿಂಚು ಮತ್ತು ತನ್ನವರನ್ನ ಕಂಡಾಗ ಹಿರಿಹಿಗ್ಗಿದ ಖುಷಿ ವಯಸ್ಸಿನ ರಕ್ತಕ್ಕೆ ಅರಿವಾಗದು, ಮೋಕ್ಷದ ದಾರಿಯೆಂದರೆ ಅತ್ಮಕ್ಕೆ ಅಂತ್ಯಗೀತೆ ಹಾಡುವುದು.
ಒಳ್ಳೆಯ ನುಡಿ, ಆಚಾರಗಳು, ಸಂಗತಿಗಳು ಎಲ್ಲವನ್ನು ತಿಳಿಸಬಲ್ಲವು,  ಬದುಕು ಅವರ ನೋವನ್ನ ಮರೆಸಲ್ಲಿ ಜೊತೆಗೆ ಸ್ವರ್ಗದ ದಾರಿಯು ತೆರೆಯಲಿ ನಲುವಿನೊಂದಿಗೆ.....

ಈ ಪಯಣ ಅಥಣಿಯ ಒಂದು ಗ್ರಾಮದಲ್ಲಿ ನಡೆದರೂ, ಅದು ಕೊಟ್ಟ ತಿಳುವಳಿಕೆ ಅಪಾರ ಮತ್ತು ಅದ್ಭುತ, ನನ್ನ ಅಣ್ಣನ ಊರಿನ ಸಮೀಪವೇಯಾದರೂ ಅಲ್ಲಿಯ ಜನರ ಆಚಾರ ವಿಚಾರಗಳು ನನಗೆ ತಂಬಾ ಆಶ್ಚರವೆನಿಸುತ್ತೆ. ನನ್ನ ಅಣ್ಣನ ಗ್ರಹಣಾ ಸಾಮರ್ಥ್ಯ ಮತ್ತು ತಿಳುವಳಿಕೆಯ ಮಟ್ಟ ವಿಶೇಷ. ಹಳ್ಳಿ ಮತ್ತು ನಗರದ ಅಂಚಿನಲ್ಲಿ ನಿಂತು ಯೋಚಿಸಿದಾಗ ಎರಡರ ವ್ಯತ್ಯಾಸಗಳು ಬಹಳ ಆದರೆ ನನ್ನ ಅಣ್ಣನ ಪ್ರಕಾರ ಅದು ಒಂದು ಗೋಡೆಯ ಎರಡನೇಯ ಬಾಗಿಲದ ಹಾಗೆ, ಒಂದು ಯೋಚನೆ ಮತ್ತು ತಿಳುವಳಿಕೆಯ ಮಟ್ಟ ಒಂದು ವ್ಯಕ್ತಿತ್ವವನ್ನ ಅವಲಂಬಿಸುತ್ತೆ. ಒಂದು ವ್ಯಕ್ತಿತ್ವದ ಪರಿಪೂರ್ಣ ಬೆಳವಣಿಗೆ ಧನಾತ್ಮಕತೆಯ ಮೇಲೆ ಸಂಪೂರ್ಣವಾಗಿ ಅವಲಂಬಣೆಯಾಗಿರುತ್ತವೆ. ನನ್ನ ಅಣ್ಣನ ಮಾತಿನಂತೆ Two creative minds, good mood and a Good situation brings a
Creative ideas, ಅಣ್ಣಾ ಇದು ನಿಜ ಮತ್ತು ಅತ್ಮಜ್ಞಾನವು ಅಗತ್ಯ. ನಂಬಿಕೆ ಹಳ್ಳಿಯ ಮಾತಾದರೆ ಕಾಲಾಂತ್ಯ ನಗರದ ಹೊಸವರಸೆ.

ಬದುಕಿನ ಪಯಣದ ಅರ್ಥವೆಂದರೆ ಇನ್ನೊಂದು ಮೊಗದಲ್ಲಿ ನಗುವಾಗುವುದು. ಎಲ್ಲವೂ ದೇವಕಲ್ಪಿತವಾದರೂ ನಮ್ಮ ಪಾತ್ರ ಬಹಳ ಮುಖ್ಯ. ಸಾಧ್ಯವಾದಷ್ಟು ಸ್ವಾರ್ಥದ ಅಂಚಿನಲ್ಲಿ ನಿಲ್ಲದೆ ಮಗುವಿನ ನಗುವಾಗಿ, ಹಿರಿಜೀವದ ಜ್ಞೌನವಾಗಿ, ತಂದೆಯ ತ್ಯಾಗವಾಗಿ, ತಾಯಿಯ ಶಕ್ತಿಯಾಗಿ, ಅಕ್ಕನ ಒಲುವಾಗಿ, ತಂಗಿಯ ಕಾಳಜಿಯಾಗಿ, ಅಣ್ಣನ ಬುದ್ದಿಯಾಗಿ, ಇನ್ನೊಬ್ಬರ ಬದುಕಿನ ನಂದಾದೀಪವಾಗೋನ, ನಮ್ಮ ಬದುಕು ಅಂತ್ಯವಾಗುತ್ತೆ ಆಗ ನಮ್ಮ ನೆನೆಪು ಕುಲದೀಪವಾಗಿ ಮಗುವಿನ ನೆನೆಪಾಗಿ ಉಳಿಯಬೇಕು. ಬದುಕೇ ಎಲ್ಲವೂ ನಿನ್ನ ಸೀಮಿತ, ಬದುಕಿನ ಕಲ್ಪನೆ ಅತ್ಮಜ್ಞೌನ, ತಿಳುವಳಿಕೆ ಮತ್ತು ಪ್ರೀತಿ, ಕಾಳಜಿ ಜಗದ ಕುಟುಂಬವಾಗಲಿ. ನಾನು ಪಡೆದ ತಂದೆಯಂತೆ ಈ ಜಗ ಪ್ರೀತಿಯಿಂದ ತುಂಬಲಿ,
ನಾನು ಪಡೆದ ತಾಯಿಯಂತೆ ಈ ಜಗ ಕಾಳಜಿಯಿಂದ ತುಂಬಲಿ, ನಾನು ಪಡೆದ ಅಕ್ಕದಿರಂತೆ ಈ ಜಗ ಶಕ್ಕಿಯಿಂದ ತುಂಬಲಿ, ನಾನು ಪಡೆದ ತಂಗಿಯಂತೆ ಈ ಜಗ ಕ್ರಿಯಾತ್ಮಕತೆಯಿಂದ ತುಂಬಲಿ, ನಾನು ಪಡೆದ ಇಬ್ಬರೂ ಅಣ್ಣಂದಿರಂತೆ ಈ ಜಗ ಬುದ್ದಿಯಿಂದ ತುಂಬಲಿ. ಈ ಜಗವೇ ತುಂಬು ಕುಟುಂಬವಾಗಲಿ ಅದೇ ನಗು, ಖುಷಿ, ಪ್ರೀತಿಯೊಂದಿಗೆ.........











ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು