ನನಗೂ ಹೇಳದೆ ಕಾಣದಂತೆ ಬಿಟ್ಟು ಹೋದಾಗ

ಈ ಜಗ ನನಗೆ ಎಲ್ಲವನ್ನು ಕೊಟ್ಟರೂ
ನಿನ್ನ ಮತ್ತೆ ನಾನು ಪಡೆಯದಷ್ಟು ಬಡವ
ಯಾವ ಋಣಕ್ಕಾಗಿ ನಮ್ಮನ್ನ ಬಿಟ್ಟು ಹೋದೆ
ಯಾವ ಖುಷಿಗಾಗಿ ನಮ್ಮನ್ನ ಅಳಿಸಿದೆ
ಯಾವ ಸುಖಕ್ಕಾಗಿ ನಮ್ಮನ್ನ ಕೇಳದೆ ಹೋದೆ
ನಿನ್ನ ಮುಖವೂ ನನಗೆ ಕಾಣದೆ ಹೋಯಿತು
ನಿನ್ನ ಮುಖವನ್ನು ನೋಡುವ ಆಸೆಯು ಕರಗಿ ಹೋಯಿತು
ನಿನ್ನಗಾಗಿ ನಾನು ಏನೂ ತರಲಿ,
ಏನೂ ದಂಡ ಕಟ್ಟಲಿ
ಮತ್ತೊಮ್ಮೆ ನೀನು ಬಂದು ನನ್ನ ನೋಡಬಾರದೆ
ದೂರದ ಆಕಾಶದ ಬದಿಯಲ್ಲಿ ನೀನು ನನ್ನ ನೋಡಿದರೂ ನಾನು ಹೇಗೆ ನೋಡಲಿ
ಈ ದಾರಿಯಲ್ಲಿ ನಾನು ಮೊದಲು ನಿನ್ನ ಬಿಟ್ಟು ಹೋಗಬೇಕಿತ್ತು ಇದು ನಿನಗೆ ಸರಿಯಲ್ಲ
ನನ್ನಗಿಂತ ಮೊದಲು ನೀನು ಹೋದದು ಯಾವ ನ್ಯಾಯ ಇದು ಅರಗಿಸಿಕೊಳ್ಳಲಾಗದ ಸತ್ಯ
ನೀನು ನನ್ನ ಜೊತೆ ಜಗಳವಾಡಲಿಲ್ಲ
ಕೋಪ ಮಾಡಿಕೊಳ್ಳಲಿಲ್ಲ.
ಹೊಡದಾಡಲಿಲ್ಲ
ನನ್ನ ಜೊತೆ ನೀನು ನಕ್ಕೆ
ನನ್ನ ಜೊತೆ ನೀನು ಕುಣಿದೆ
ನನ್ನ ಜೊತೆ ನೀನು ಅತ್ತೆ
ನನ್ನ ಜೊತೆ ನೀನು ತಮಾಷೆ ಮಾಡಿದೆ
ಅದನ್ನ ಮೀರಿ ನಿನ್ನ ಬಾಯಿ ತುಂಬಾ ನನ್ನ ಕೂಗಿದೆ
ಕಷ್ಟ ಇರಲಿ ಸುಖ ಇರಲಿ
ನಿನಗೆ ಯಾವುದು ಕಡಿಮೆಯಾಗಿರಲಿಲ್ಲ
ಆದರೂ ನನ್ನ ಪ್ರಶ್ನೆಗೆ ಉತ್ತರವಾಗಲಿಲ್ಲ.
ನಿನ್ನ ಹೆಜ್ಜೆಗಳು ಇಡೀ ವಿಶ್ವಕ್ಕೆ ಸಾಗಬೇಕಿದವು
ಆದರೂ ನಮ್ಮನ್ನ ನೀನು ಮರೆತೆ.
ನಿನ್ನ ಪೆದ್ದುತನಕ್ಕೆ ನಾವು ನಕ್ಕಿದೇವು
ಖುಷಿ ಪಟ್ಟಿದೇವು
ಕೆಲವೇ ಕ್ಷಣಗಳಲ್ಲಿ ನೀನು ನಮ್ಮನ್ನ ಅಗಲಿದೆ
ಯಾವ ಬೇಸರವೂ ನಮಗೆ ಮಾಡದೆ
ಯಾವ ಹೊರೆಯನ್ನು ಹೊರಿಸದೆ
ನೀನು ನಿನ್ನ ದಾರಿ ನೋಡಿದೆ
ಒಮ್ಮೆ ನಮ್ಮಗಾಗಿ ತಿರುಗಿ ನೋಡಬೇಕಿತ್ತು
ನಿನ್ನಗಾಗಿ ನಾವು ಕಾಯುತ್ತಾ ಯಿದ್ದೆವು
ನಿನ್ನ ನಗು ನೋಡಬೇಕೆಂಬ ಭರವಸೆಯಿದ್ದರೂ
ಅದನ್ನು ನೀನು ಸುಳ್ಳು ಮಾಡಿದೆ
ನಿನ್ನ ವಿರುದ್ದ ನನ್ನ ಧಿಕ್ಕಾರವಿರಲಿ
ನಾನು ಈಗ ಯಾರ ವಿರುದ್ದ ಹೋರಾಡಲಿ
ಯಾರ ಮುಂದೆ ಹೋಗಿ ಪ್ರತಿಭಟಿಸಲಿ
ನೀನು ಮರಳಿ ಬಾರದೆ ಹೋಗಿರುವೆ
ನಾನು ಒಮ್ಮೆ ನಿನ್ನ ಹತ್ತಿರ ಬರುವೆ
ಆಗ ನಿನ್ನ ವಿರುದ್ದ ಪ್ರತಿಭಟಿಸುವೆ
ಅಲ್ಲಿವರೆಗೂ ನನ್ನ ಒಂಟಿ ಮಾಡಿದೆ.
ಪ್ರಥಮ ಪುಟ್ಟಾ love u...
ನಿನ್ನ ಕಳೆದುಕೊಂಡು ನಾನು ಒಂಟಿಯಾಗಿ ಮಳೆಯಲ್ಲಿ ನಿಂತಿರುವೆ
ನನ್ನ ಅಳುವ ನೋಡಿ ನಿನ್ನ ದುಃಖ ಪಡದಿರೂ
ನಿನ್ನಗಾಗಿ ದೇವರು ಎಲ್ಲವನ್ನು ಕೊಟ್ಟು ಹರಿಸಲಿ
ಮುಂದಿನ ಜನ್ಮವಿದರೆ ನಿನ್ನ ಜೊತೆ ಹುಟ್ಟುವೆ
Love u putta misssssss......
u putta........
Love u forever
U always in my heart...
Loveeeeeee uuuuuuuu......

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು